2022 ಆರಂಭವಾಗಿದೆ. 2021ರಲ್ಲಿ ಸಾಕಷ್ಟು ಬದಲಾವಣೆಗಳನ್ನು ನಾವು ಕಂಡಿದ್ದೇವೆ. ಆ ಇಡೀ ವರ್ಷವೂ ನಾವು ಕೋವಿಡ್ ಕರಿನೆರಳಿನಲ್ಲಿಯೇ ಬದುಕಿದ್ದೇವೆ. ಕಳೆದ ವರ್ಷದಲ್ಲಿ ಆನ್ಲೈನ್ನಲ್ಲಿ ಅತೀ ಹೆಚ್ಚು ಆಹಾರಗಳನ್ನು ಆರ್ಡರ್ ಮಾಡಲಾಗಿದೆ.
ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಆನ್ಲೈನ್ನಲ್ಲಿ ಫುಡ್ ಆರ್ಡರ್ ಮಾಡೋದು ಒಂದು ವರದಾನದ ರೀತಿಯಲ್ಲಿ ಕಂಡಿದೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಹೋಟೆಲ್, ರೆಸ್ಟಾರೆಂಟ್ಗಳಿಗೆ ಹೋಗಲು ಅವಕಾಶ ಇಲ್ಲದಂತಹ ಸಂದರ್ಭಗಳಲ್ಲಿ ಆನ್ಲೈನ್ ಫುಡ್ ಡೆಲಿವರಿ ಅಪ್ಲಿಕೇಶನ್ಗಳು ನಮ್ಮ ಬಯಕೆ ತೀರಿಸಿವೆ ಎಂದು ಹೇಳಿದರೆ ತಪ್ಪು ಎನಿಸದು.
ಈ ನಡುವೆ ಜೊಮ್ಯಾಟೋ ಕಳೆದ ವರ್ಷದಲ್ಲಿ ಆರ್ಡರ್ ಮಾಡಲಾದ ಆಹಾರಗಳ ಪಟ್ಟಿಯೊಂದನ್ನ ಬಿಡುಗಡೆ ಮಾಡಿದೆ. 2021ರಲ್ಲಿ ಅತೀ ಹೆಚ್ಚು ಆರ್ಡರ್ ಮಾಡಲಾದ ಫುಡ್ನ ಹೆಸರು ಕೇಳಿದ್ರೆ ನೀವು ಆಶ್ಚರ್ಯಚಕಿತರಾಗೋದು ಪಕ್ಕಾ..!
ಭಾರತದಲ್ಲಿ ಪ್ರತಿ ಸೆಕೆಂಡ್ಗೆ 2 ಬಿರಿಯಾನಿ ಆರ್ಡರ್ ಮಾಡಲಾಗಿದೆಯಂತೆ. 2020 ವರ್ಷದಂತೆಯೇ ಕಳೆದ ವರ್ಷವೂ ಕೂಡ ಭಾರತದಲ್ಲಿ ಬಿರಿಯಾನಿಯನ್ನೇ ಅತೀ ಹೆಚ್ಚು ಆರ್ಡರ್ ಮಾಡಲಾಗಿದೆ.
ಜಾರಕಿಹೊಳಿ ಬ್ರದರ್ಸ್ ಆಟಕ್ಕೆ ಮತ್ತೆ ಮುದುಡಿದ ಕಮಲ: ಸ್ಥಳೀಯ ಸಂಸ್ಥೆಯಯಲ್ಲೂ ಬಿಜೆಪಿಗೆ ಬಿಗ್ ಶಾಕ್
ಈ ಬಾರಿ ಭಾರತ ಹಾಗೂ ಪಾಕಿಸ್ತಾನದ ನಡುವಿನ ಪಂದ್ಯವು ಭಾರತೀಯರಿಗೆ ತೀವ್ರ ನಿರಾಶೆ ಉಂಟು ಮಾಡಿದ್ದಂತೂ ಸುಳ್ಳಲ್ಲ. ಆದರೆ ಪಾಕ್ ವಿರುದ್ಧ ಸಿಕ್ಕ ಸೋಲಿನ ಕಹಿಯನ್ನು ಜೊಮ್ಯಾಟೋ ಫುಡ್ ಮರೆಸಿದಂತೆ ಕಾಣುತ್ತಿದೆ.
ಏಕೆಂದರೆ ಮ್ಯಾಚ್ ದಿನದಂದು ಕೇವಲ ಜೊಮ್ಯಾಟೋ ಆ್ಯಪ್ ಒಂದರಲ್ಲೇ 10,62,710 ಜನರು ಫುಡ್ ಆರ್ಡರ್ ಮಾಡಿದ್ದಾರೆ…! ಭಾರತದಲ್ಲಿ ಇನ್ನೂ ಅನೇಕ ಆನ್ಲೈನ್ ಫುಡ್ ಡೆಲಿವರಿ ಆ್ಯಪ್ಗಳಿವೆ. ಹಾಗಾದರೆ ದೇಶದಲ್ಲಿ ಅಂದು ಒಟ್ಟು ಎಷ್ಟು ಮಂದಿ ಫುಡ್ ಆರ್ಡರ್ ಮಾಡಿರಬಹುದು ಎಂಬುದನ್ನು ನೀವೇ ಅಂದಾಜಿಸಿ..!
ಶ್ವೇತಾ ಎಂಬ ಹೆಸರಿನವರು ಒಂದೇ ದಿನದಲ್ಲಿ ಬರೋಬ್ಬರಿ 12 ಬಾರಿ ಐಸ್ಕ್ರೀಂ ಆರ್ಡರ್ ಮಾಡಿದ್ದಾರಂತೆ. ಬಹುಶಃ ಆಕೆಗೆ ಅಂದು ಏನೋ ಬೇಸರವಾಗಿ ಈ ರೇಂಜ್ಗೆ ಐಸ್ಕ್ರೀಂ ತಿಂದಿರಬಹುದು..! ಅಥವಾ ಅತಿಥಿಗಳು ಒಬ್ಬರಾದ ಮೇಲೆ ಒಬ್ಬರಂತೆ ಮನೆಗೆ ಬಂದಿರಬಹುದೇನೋ..?
ಮೋಮೋಸ್ ಬಹುತೇಕರ ಫೇವರಿಟ್ ಸ್ನ್ಯಾಕ್. ಕಳೆದೊಂದು ವರ್ಷದಲ್ಲಿ ಜೊಮ್ಯಾಟೋದಲ್ಲಿ 1,06,66,095 ಬಾರಿ ಮೊಮೋ ಆರ್ಡರ್ ಮಾಡಲಾಗಿದೆ.