ಬಾಧ್ಯತೆಗಳು : ಮೂರನೇ ವ್ಯಕ್ತಿಯಿಂದ ಮದುವೆ ಕಾರ್ಯಕ್ರಮಗಳಲ್ಲಿ ಉಂಟಾಗುವ ಅಪಘಾತಗಳಿಂದಾಗಿ ಸಂಭವಿಸುವ ಯಾವುದೇ ನಷ್ಟವನ್ನು ಇದು ತುಂಬಿಕೊಡುತ್ತದೆ.
ಕ್ಯಾನ್ಸಲೇಷನ್ ಕವರೇಜ್ : ಮದುವೆ ಸಡನ್ ಆಗಿ ರದ್ದಾದರೆ ಆಗ ಉಂಟಾಗುವ ನಷ್ಟಗಳನ್ನು ಭರಿಸುತ್ತದೆ.
ಪ್ರಾಪರ್ಟಿ ಡ್ಯಾಮೇಜ್ : ಮದುವೆ ಕಾರ್ಯಕ್ರಮಗಳಲ್ಲಿ ಉಂಟಾಗುವ ಪ್ರಾಪರ್ಟಿ ಡ್ಯಾಮೇಜ್ಗಳ ನಷ್ಟವನ್ನು ಭರಿಸುತ್ತದೆ.
ವೈಯಕ್ತಿಕ ಅಪಘಾತ : ಮದುವೆ ಸಮಯದಲ್ಲಿ ವಧು ಅಥವಾ ವರನಿಗೆ ಅಪಘಾತವಾದಲ್ಲಿ ಆಸ್ಪತ್ರೆ ವೆಚ್ಚವನ್ನು ಭರಿಸುತ್ತದೆ.
ಕ್ಯಾಟರಿಂಗ್ಗೆ ನೀಡಲಾದ ಮುಂಗಡ ಹಣ.
ಮದುವೆ ಆಯೋಜಕರಿಗೆ ನೀಡಲಾದ ಮುಂಗಡ ಹಣ.
ಟ್ರಾವೆಲ್ ಏಜೆನ್ಸಿಗಳಿಗೆ ನೀಡಲಾದ ಮುಂಗಡ ಹಣ.
ಹೋಟೆಲ್ ರೂಮ್ಗಳನ್ನು ಬುಕ್ ಮಾಡಲು ನೀಡಲಾದ ಹಣ.
ಮದುವೆ ಆಮಂತ್ರಣ ಪತ್ರಿಕೆ ಮುದ್ರಣ ವೆಚ್ಚ.
ಮ್ಯೂಸಿಕ್ ಹಾಗೂ ಡೆಕೋರೇಷನ್ಗೆ ನೀಡಲಾದ ಹಣ.
ವಿವಾಹ ವಿಮೆ ಮಾಡಿಸಿದ ನೀವು ಮದುವೆ ದಿನಗಳಲ್ಲಿ ಯಾವುದೇ ರೀತಿಯಲ್ಲಿ ತೊಂದರೆಯಾಗಿ ಮದುವೆ ರದ್ದಾದಲ್ಲಿ ಕೂಡಲೇ ಇನ್ಶುರೆನ್ಸ್ ಕಂಪನಿಗೆ ಮಾಹಿತಿ ನೀಡಬಹುದು. ಇದಾದ ಬಳಿಕ ವಿಮಾ ಕಂಪನಿಯಿಂದ ವಿವಿಧ ಆಯಾಮಗಳಲ್ಲಿ ವಿಚಾರಣೆ ನಡೆಯಲಿದೆ. ನೀವು ಸೂಕ್ತ ಕಾರಣಗಳಿಂದ ನಷ್ಟವನ್ನು ಅನುಭವಿಸಿರುವುದು ಸಾಬೀತಾದಲ್ಲಿ ಆ ಹಣವನ್ನು ವಿಮೆಯು ಭರಿಸಲಿದೆ.