15 ರಿಂದ 18 ವರ್ಷದೊಳಗಿನ ಮಕ್ಕಳು ಜನವರಿ 1ರಿಂದ ಕೋವಿನ್ ಅಪ್ಲಿಕೇಶನ್ ಮೂಲಕ ಕೊರೊನಾ ಲಸಿಕೆಗೆ ನೋಂದಣಿ ಮಾಡಬಹುದು. ಎರಡು ದಿನಗಳ ಮೊದಲು ಲಸಿಕೆ ಕಾರ್ಯಕ್ರಮವನ್ನು ದೇಶಾದ್ಯಂತ ವಿಸ್ತರಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರದ ಉನ್ನತಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಲಸಿಕೆಗೆ ನೋಂದಣಿಯಾಗಿ ನಾವು 10ನೇ ತರಗತಿಯ ಗುರುತಿನ ಚೀಟಿಯನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡಿದ್ದಾರೆ. ಆಧಾರ್ ಕಾರ್ಡ್ ಸೇರಿದಂತೆ ಇತರೆ ಗುರುತಿನ ಚೀಟಿಯನ್ನು ಹೊಂದಿಲ್ಲದ ಮಕ್ಕಳು 10ನೇ ತರಗತಿಯ ಗುರುತಿನ ಚೀಟಿಯನ್ನೇ ಬಳಕೆ ಮಾಡಬಹುದಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ಎಸ್. ಶರ್ಮಾ ಹೇಳಿದ್ದಾರೆ.
15-18 ವರ್ಷ ವಯಸ್ಸಿನ ಮಕ್ಕಳು ಜನವರಿ 3 ರಿಂದ ಕೋವಿಡ್ -19 ಲಸಿಕೆಗಳನ್ನು ಸ್ವೀಕರಿಸಲಿದ್ದಾರೆ. ಮತ್ತು ಓಮಿಕ್ರಾನ್ ಕರೋನ ವೈರಸ್ ರೂಪಾಂತರದ ಪ್ರಕರಣಗಳು ದೇಶಾದ್ಯಂತ ಹೆಚ್ಚುತ್ತಿರುವ ಕಾರಣ ಜನವರಿ 10 ರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರು ಶಾಟ್ಗಳನ್ನು ಪಡೆಯಲು ಪ್ರಾರಂಭಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಘೋಷಣೆ ಮಾಡಿದ್ದಾರೆ.