ಕೆ-ಪಾಪ್ ಇಂಡಸ್ಟ್ರಿಯನ್ನೇ ಆಳುತ್ತಿರುವ ಬಿಟಿಎಸ್ ತಂಡಕ್ಕೆ ಕೊರೋನಾದ ಕಾಟ ಹೆಚ್ಚಾಗಿದೆ. ಕಳೆದ ವಾರ ತಂಡದ ಸದಸ್ಯ ಸೂಗಾ ಕೊರೋನಾದಿಂದ ಸೋಂಕಿತರಾಗಿದ್ರು, ಈಗ ಮತ್ತೊಂದು ಸುದ್ದಿ ಹೊರಬಿದ್ದಿದ್ದು ಆರ್ ಎಮ್ ಹಾಗೂ ಜಿನ್ ಇಬ್ಬರಲ್ಲು ಕೋವಿಡ್ ಪತ್ತೆಯಾಗಿದೆ.
ಇತ್ತೀಚೆಗೆ ಅಮೇರಿಕಾದಲ್ಲಿ ನಡೆದ ಕಾನ್ಸರ್ಟ್ ನಿಂದ ಬಂದಮೇಲೆ ಕೋವಿಡ್ ನಿಯಮದಂತೆ ತಂಡದ ಎಲ್ಲಾ ಸದಸ್ಯರು ಕೊರೋನಾ ಟೆಸ್ಟ್ ಗೆ ಒಳಗಾಗಿದ್ದರು. ಅದ್ರಲ್ಲಿ ಮೊದಲು ಸೂಗಾಗೆ ಕೋವಿಡ್ ಪಾಸಿಟಿವ್ ಎಂದು ತಿಳಿದು ಬಂದಿತ್ತು.
ಕಿಮ್ ನಾಮ್ ಜುನ್ ಅಂದರೆ ಆರ್ ಎಮ್ ಹಾಗೂ ಕಿಮ್ ಸಿಯೋಕ್ ಜಿನ್ (ಜಿನ್) ಇಬ್ಬರ ಟೆಸ್ಟ್ ರಿಸಲ್ಟ್ಸ್ ಮೊದಲು ನೆಗೆಟಿವ್ ಬಂದಿತ್ತು. ಆದರೂ ಸೌತ್ ಕೊರಿಯಾದ ಕೊರೋನಾ ನಿಯಮದಡಿಯಲ್ಲಿ ಇಬ್ಬರು ತಮ್ಮ ತಮ್ಮ ಮನೆಗಳಲ್ಲೆ ಕ್ವಾರಂಟೈನ್ ಆಗಿದ್ದರು.
ಅಧಿಕಾರಿಗೆ ಗುಂಡು ಹಾರಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಸಿ.ಆರ್.ಪಿ.ಎಫ್. ಯೋಧ
ನೆನ್ನೆಗೆ ಇಬ್ಬರ ಕ್ವಾರಂಟೈನ್ ಅವಧಿ ಮುಗಿದಿತ್ತು. ಆದರೆ ನೆನ್ನೆ ಮಧ್ಯಾಹ್ನ ಆರ್ ಎಮ್ ಗೆ ಕೆಮ್ಮು, ನೆಗಡಿ ಕಾಣಿಸಿಕೊಂಡಿದ್ದರಿಂದ ಮತ್ತೊಂದು ಬಾರಿ ಪಿಸಿಆರ್ ಟೆಸ್ಟ್ ನಡೆಸಿದಾಗ ಪಾಸಿಟಿವ್ ಬಂದಿದೆ. ಇತ್ತ ಅದೇ ವೇಳೆ ಜಿನ್ ಅವರ ಸ್ಯಾಂಪಲ್ಸ್ ಅನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರಲ್ಲು ಕೊರೋನಾ ಪತ್ತೆಯಾಗಿದೆ. ಈ ಬಗ್ಗೆ ಬಿಗ್ ಹಿಟ್ ಮ್ಯೂಸಿಕ್ ಪತ್ರಿಕಾ ಹೇಳಿಕೆ ನೀಡಿದ್ದು, ಇಬ್ಬರಲ್ಲೂ ಸೌಮ್ಯ ಸ್ವಭಾವದ ಗುಣಲಕ್ಷಣಗಳಿವೆ. ಕೆಮ್ಮು, ನೆಗಡಿ, ಜ್ವರ ಇದೆಯಷ್ಟೇ ಇಬ್ಬರು ಮನೆಯಲ್ಲಿಯೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದೆ.