ದಾವಣಗೆರೆ: ಸಿಎಂ ಬಸವರಾಜ್ ಬೊಮ್ಮಾಯಿ ಒಬ್ಬ ಕೋಮುವಾದಿ ಎಂದು ನಟ ಚೇತನ್ ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಅವರ ತಂದೆ ಎಸ್.ಆರ್. ಬೊಮ್ಮಾಯಿ ಅವರು ಜನಪರ ಆಡಳಿತ ನೀಡಿದ್ದರು. ಆದರೆ, ಇಂದು ಅಂತಹ ವ್ಯಕ್ತಿಯ ಮಗ ಕೋಮುವಾದಿ ಆಡಳಿತ ನೀಡುತ್ತಿದ್ದಾರೆ. ರಾಜ್ಯವು ಈ ಹಿಂದೆ ಇಷ್ಟೊಂದು ದೊಡ್ಡ ಕೋಮುವಾದಿಯ ಆಡಳಿತಕ್ಕೆ ಸಿಕ್ಕಿರಲಿಲ್ಲ ಎಂದು ಕಿಡಿಕಾರಿದ್ದಾರೆ.
ಮತಾಂತರ ನಿಷೇಧ ಕಾಯ್ದೆ ಸಂವಿಧಾನಕ್ಕೆ ವಿರುದ್ಧವಾಗಿದೆ. ಜನರು ಅವರಿಗೆ ಬೇಕಾದ ಧರ್ಮಕ್ಕೆ ಸೇರಬೇಕಾದ ಹಕ್ಕು ಹೊಂದಿದ್ದರು. ಆದರೆ, ಇವರು ಮಹನೀಯರ ಹೇಳಿಕೆ ಹಾಗೂ ಸಿದ್ಧಾಂತದ ವಿರುದ್ಧ ನಡೆದುಕೊಂಡಿದ್ದಾರೆ. ಬಸವಣ್ಣ ಹಾಗೂ ಅಂಬೇಡ್ಕರ್ ತಮಗೆ ಬೇಕಾದ ಧರ್ಮ ಆಯ್ಕೆ ಮಾಡಿಕೊಂಡಿದ್ದರು. ಈ ಕಾಯ್ದೆ ಜಾರಿಯಿಂದಾಗಿ ಜನರ ಮೇಲೆ ದಬ್ಬಾಳಿಕೆ ನಡೆಸಿದಂತಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಗೂಗಲ್ನಲ್ಲಿ ಈ ವಿಚಾರಗಳನ್ನು ತಪ್ಪಿಯೂ ಹುಡುಕಬೇಡಿ..!
ರಾಜ್ಯದಲ್ಲಿ ಸ್ವಾಮೀಜಿಗಳು ಸಮಾಜವನ್ನು ಒಡೆದು ಆಳುವ ಸನ್ನವೇಶ ಸೃಷ್ಟಿಸುತ್ತಿದ್ದಾರೆ. ಸಸ್ಯಾಹಾರಿಗಳಿಗಾಗಿ ಶಾಲೆ ಪ್ರಾರಂಭಿಸುವ ಬೇಡಿಕೆಗಳನ್ನು ಸೃಷ್ಟಿಸುವುದು ಸರಿಯಲ್ಲ. ಅನುಭವ ಮಂಟಪದಲ್ಲಿ ಕೂಡ ಮಾಂಸಾಹಾರಿಗಳಿದ್ದರು ಎಂಬುವುದನ್ನು ಸ್ವಾಮೀಜಿಗಳು ಅರಿತುಕೊಳ್ಳಬೇಕು ಎಂದು ಹೇಳಿದ್ದಾರೆ.