alex Certify ದೆಹಲಿ ಪೊಲೀಸ್ ಹಾಗೂ NDMC ಗೆ ಚಾಟಿ ಬೀಸಿದ ಹೈಕೋರ್ಟ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೆಹಲಿ ಪೊಲೀಸ್ ಹಾಗೂ NDMC ಗೆ ಚಾಟಿ ಬೀಸಿದ ಹೈಕೋರ್ಟ್..!

ನವದೆಹಲಿಯ ಸರೋಜಿನಿ ಮಾರ್ಕೆಟ್ ಇಡೀ ದೇಶದಲ್ಲೆ ಅತ್ಯಂತ ಬ್ಯುಸಿಯೆಸ್ಟ್ ವ್ಯಾಪಾರ ಸ್ಥಳ. ಕೋವಿಡ್ ಇರಲಿ ಒಮಿಕ್ರಾನ್ ಇರಲಿ ಈ ಮಾರ್ಕೆಟ್ ನಲ್ಲಿ ಜನದಟ್ಟಣೆ ಎಂದೂ ಕಮ್ಮಿಯಾಗಿಲ್ಲ‌‌. ಈಗಾಗ್ಲೇ ಈ ಹಿಂದೆ ಈ ಬಗ್ಗೆ ನ್ಯಾಯಾಲಯ ಎಚ್ಚರಿಸಿದ್ದರೂ ಜನಸಂದಣಿ ನಿಯಂತ್ರಿಸಲು ಯಾವುದೇ ಕ್ರಮ‌ ಕೈಗೊಳ್ಳದಿರುವುದರಿಂದ ಈ ಸ್ಥಿತಿಯನ್ನ ಗಂಭೀರವಾಗಿ ಪರಿಗಣಿಸಿರುವ ದೆಹಲಿ ಹೈಕೋರ್ಟ್ ಲಾಸ್ಟ್ ವಾರ್ನಿಂಗ್ ನೀಡಿದೆ.

ದೇಶದೆಲ್ಲೆಡೆ ಒಮಿಕ್ರಾನ್ ಕೇಸ್ ಗಳು ಹೆಚ್ಚಾಗುತ್ತಿದೆ, ಕೊರೋನಾ ಪರಿಸ್ಥಿತಿ ಕೈಮೀರಬಾರದು. ಈಗಾಗ್ಲೇ ಸರೋಜಿನಿಯಲ್ಲಿ, ಕಾಲ್ತುಳಿತ, ಬ್ಲಾಸ್ಟ್ ನಂತಹ ಗಂಭೀರ ಘಟನೆಗಳು ಜರುಗಿವೆ.‌ ಒಂದು ವೇಳೆ ಕಾಲ್ತುಳಿತದಿಂದಾಗಲಿ, ಬ್ಲಾಸ್ಟ್ ನಿಂದಾಗಲಿ ಅಥವಾ ಕೊರೋನಾದಿಂದಾಗಲಿ ಯಾರೊಬ್ಬರು ಸತ್ತರೂ ದೆಹಲಿ ಪೊಲೀಸ್ ಹಾಗೂ ನವದೆಹಲಿಯ ಮುನ್ಸಿಪಲ್ ಕೌನ್ಸಿಲ್ ಇದಕ್ಕೆ ಹೊಣೆಯಾಗಿರುತ್ತಾರೆ ಎಂದು ಕೋರ್ಟ್ ಎಚ್ಚರಿಸಿದೆ‌.

investment in post office: ಸುರಕ್ಷಿತ ಹೂಡಿಕೆ ಬಯಸಿದ್ರೆ ಅಂಚೆ ಕಚೇರಿಯ ಈ ಯೋಜನೆ ಬೆಸ್ಟ್

ಈ ಹಿಂದಿನ ಕೋರ್ಟ್ ಆದೇಶವನ್ನು ಪಾಲಿಸದಿರುವುದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶರು, ನ್ಯಾಯಾಲಯದ ತೀರ್ಪನ್ನು ಕಡೆಗಣಿಸಬಹುದು ಎಂದುಕೊಂಡರೆ ಅದು ನಿಮ್ಮ ಭ್ರಮೆ. ಇಂಥಹ ಬೇಜವಾಬ್ದಾರಿ ಮತ್ತೊಮ್ಮೆಯಾದರೆ ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದೆ‌. ಅಲ್ಲದೇ NDMC ಯ ಅಧಿಕಾರಿಗಳ ವಿರುದ್ಧ ಕಂಟೆಂಪ್ಟ್ ನೋಟೀಸ್ ಜಾರಿ ಮಾಡಿರುವ ಕೋರ್ಟ್, ಸರೋಜಿನಿಯ ಅಕ್ರಮ‌ ಮಾರಾಟಗಾರರನ್ನ ತೆರವುಗೊಳಿಸಿ, ಜನದಟ್ಟಣೆ ನಿಯಂತ್ರಿಸಿ ಎಂದು ದೆಹಲಿ ಪೊಲೀಸ್ ಗೆ ಆದೇಶ ನೀಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...