ಪ್ರಸಿದ್ಧ ಮಾರ್ವೆಲ್ ಸೂಪರ್ ಹೀರೋ ಸ್ಪೈಡರ್ ಮ್ಯಾನ್ನಂತೆಯೇ ಕಾಣುವ ಹಲ್ಲಿಯ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಭಾರತೀಯ ಅರಣ್ಯ ಇಲಾಖೆ ಅಧಿಕಾರಿ ಸುಸಾಂತ ನಂದಾ ಈ ಫೋಟೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ.
ಫೋಟೋದಲ್ಲಿ ಕಾಣುತ್ತಿರುವ ಈ ಹಲ್ಲಿಯನ್ನು ಫ್ಲಾಟ್ ಹೆಡೆಡ್ ರಾಕ್ ಆಗಮಾ ಎಂದು ಕರೆಯಲಾಗುತ್ತದೆ.
ಇದು ಥೇಟ್ ಸ್ಪೈಡರ್ ಮ್ಯಾನ್ನಂತೆಯೇ ಕೆಂಪು ಹಾಗೂ ನೀಲಿ ಬಣ್ಣವನ್ನು ಹೊಂದಿದೆ. ಇದೇ ಕಾರಣಕ್ಕಾಗಿ ಇದನ್ನು ಸ್ಪೈಡರ್ ಮ್ಯಾನ್ ಆಗಮಾ ಎಂದೂ ಕರೆಯಲಾಗುತ್ತದೆ.
ನಿಜ ಜೀವನದ ಸ್ಪೈಡರ್ ಮ್ಯಾನ್, ಫ್ಲಾಟ್ ಹೆಡೆಡ್ ರಾಕ್ ಅಗಾಮಾ, ಕೆಲವು ಕಡೆಗಳಲ್ಲಿ ಸ್ಪೈಡರ್ ಮ್ಯಾನ್ ಆಗಮಾ ಎಂದೂ ಗುರುತಿಸಲಾಗುತ್ತದೆ. ಇದು ರೀಲ್ ಜೀವನದ ಸ್ಪೈಡರ್ ಮ್ಯಾನ್ನಂತೆಯೇ ಲಂಬನೆಯ ಗೋಡೆಗಳನ್ನು ಏರುವ ಸಾಮರ್ಥ್ಯ ಹೊಂದಿದೆ ಎಂದು ನಂದಾ ಈ ಹಲ್ಲಿ ಫೋಟೋಗೆ ಶೀರ್ಷಿಕೆ ನೀಡಿದ್ದಾರೆ.
ಇದರಲ್ಲಿ ಗಂಡು ಜಾತಿಯ ಹಲ್ಲಿಗಳ ತಲೆ, ಕುತ್ತಿಗೆ ಹಾಗೂ ಭುಜಗಳಲ್ಲಿ ಪ್ರಕಾಶಮಾನವಾದ ನೇರಳೆ ಅಥವಾ ಕೆಂಪು ಬಣ್ಣವನ್ನು ಹೊಂದಿರುತ್ತದೆ. ದೇಹದ ಉಳಿದ ಭಾಗಗಳು ಗಾಢ ನೀಲಿ ಬಣ್ಣವನ್ನು ಹೊಂದಿರುತ್ತದೆ. ಹೆಣ್ಣು ಹೆಚ್ಚಾಗಿ ಕಂದು ಬಣ್ಣದಲ್ಲಿ ಇರುತ್ತದೆ. ಪುರುಷ ಹಲ್ಲಿಯ ಬಣ್ಣದಿಂದಾಗಿ ಈ ಜಾತಿಯ ಹಲ್ಲಿಗಳು ಅತೀ ಹೆಚ್ಚು ಪ್ರಸಿದ್ಧಿಯನ್ನು ಹೊಂದಿದೆ.
https://twitter.com/susantananda3/status/1473314872595124232