ಕೊರೊನಾ ಹಾಗೂ ರೂಪಾಂತರಿಯ ಆತಂಕ ಸದ್ಯ ಇಡೀ ಜಗತ್ತಿನಲ್ಲಿ ಆವರಿಸಿದೆ. ಹಲವು ರಾಷ್ಟ್ರಗಳು ಕೊರೊನಾದಿಂದಾಗಿ ತತ್ತರಿಸಿ ಹೋಗಿವೆ. ಹೀಗಾಗಿ ಎಲ್ಲೆಡೆ ಲಸಿಕೆ ಪಡೆಯುವಂತೆ ಜನರನ್ನು ಪ್ರೇರೇಪಿಸಲಾಗುತ್ತಿದ್ದು, ಹಲವೆಡೆ ಕಟ್ಟು ನಿಟ್ಟಿನ ನಿಯಮ ಜಾರಿಗೊಳಿಸಲಾಗುತ್ತಿದೆ.
ಆದರೂ ಹಲವರು ಮಾತ್ರ ಲಸಿಕೆ ಕುರಿತು ಅಸಡ್ಡೆ ತೋರಿಸುತ್ತಿದ್ದಾರೆ. ಹೀಗೆ ಲಸಿಕೆ ಹಾಕಿಸಿಕೊಳ್ಳದ ಜನರು ಬೇರೆಯವರಿಗೆ ಹಣ ಕೊಟ್ಟು, ಅವರಿಂದ ಪ್ರಮಾಣ ಪತ್ರ ಪಡೆಯುತ್ತಿರುವ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಲೈಂಗಿಕ ವ್ಯಸನಿಯಾಗಿದ್ದ ಬಗ್ಗೆ ಬಹಿರಂಗವಾಗಿಯೇ ಹೇಳಿಕೊಂಡ ಸುಪ್ರಸಿದ್ಧ ನಟ…..!
ಬೆಲ್ಜಿಯಂನಲ್ಲಿ ಇಂತಹ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಯುವಕನೊಬ್ಬ ಲಸಿಕೆ ಹಾಕಿಸಿಕೊಳ್ಳದ ಜನರಿಂದ ದೊಡ್ಡ ಪ್ರಮಾಣದ ಹಣ ಪಡೆದು, ಅವರ ಹೆಸರಿನಲ್ಲಿ ತಾನು ಲಸಿಕೆ ಹಾಕಿಸಿಕೊಂಡು ಪ್ರಮಾಣ ಪತ್ರ ನೀಡುತ್ತಿದ್ದ ಎನ್ನಲಾಗಿದೆ. ಹೀಗೆ 8 ಬಾರಿ ಲಸಿಕೆ ಹಾಕಿಸಿಕೊಂಡಿದ್ದ ಈ ಯುವಕ, 9ನೇ ಬಾರಿ ಪೊಲೀಸರ ಕೈಯಲ್ಲಿ ಸಿಕ್ಕಿ ಬಿದ್ದಿದ್ದಾನೆ.
ಪದೇ ಪದೇ ಈ ಯುವಕ ಲಸಿಕೆ ಹಾಕಿಸಿಕೊಳ್ಳುವುದನ್ನು ಗಮನಿಸಿದ ಆರೋಗ್ಯ ಕಾರ್ಯಕರ್ತರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಯುವಕನನ್ನು ಬಂಧಿಸಿದ ಪೊಲೀಸರಿಗೆ ಸತ್ಯ ತಿಳಿದು ಬಂದಿದೆ. ಆದರೆ, ಹಣ ಕೊಟ್ಟು ಈತನಿಗೆ ಲಸಿಕೆ ಹಾಕಿಸಿ, ಪ್ರಮಾಣ ಪತ್ರ ಪಡೆಯುತ್ತಿದ್ದ ವ್ಯಕ್ತಿಗಳ ಬಗ್ಗೆ ಪೊಲೀಸರು ಮಾಹಿತಿ ಬಹಿರಂಗ ಪಡಿಸಿಲ್ಲ.
ಈ ಯುವಕ 8 ಬಾರಿ ಲಸಿಕೆ ಪಡೆದರೂ ಆತನ ದೇಹದಲ್ಲಿ ಯಾವುದೇ ಅಡ್ಡ ಪರಿಣಾಮಗಳಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.