ಪುನೀತ್ ರಾಜ್ ಕುಮಾರ್ ಇಹಲೋಕ ತ್ಯಜಿಸಿ ಹಲವು ದಿನಗಳೇ ಕಳೆದರೂ ಕನ್ನಡಿಗರ ಮನಸ್ಸು ಮಾತ್ರ ಇನ್ನೂ ಭಾರವಾಗಿಯೇ ಉಳಿದಿದೆ. ಅವರ ನೆನಪು ಬಂದಾಗಲೆಲ್ಲ ಕನ್ನಡಿಗರ ಕಣ್ಣಾಲಿಗಳು ತುಂಬಿ ಬರುತ್ತವೆ. ಇದರ ಮಧ್ಯೆ ಪುನೀತ್ ಅವರ ಸಮಾಜ ಸೇವೆಯ ಒಂದೊಂದೇ ವಿಷಯಗಳು ಅಭಿಮಾನಿಗಳನ್ನು ಮುಟ್ಟುತ್ತಿವೆ.
ಈಗ ಮತ್ತೊಂದು ಇಂತಹ ವಿಷಯವೊಂದು ಬಹಿರಂಗವಾಗಿದೆ. ಈ ಬಾರಿ ಪುನೀತ್ ಅವರದ್ದಲ್ಲ, ಅವರ ಹಾದಿಯಲ್ಲಿಯೇ ನಡೆಯುತ್ತಿರುವ ಅವರ ಧರ್ಮಪತ್ನಿಯದ್ದು.
ಚಿತ್ರರಂಗದಲ್ಲಿ ನಟ, ನಟಿಯರು ಮುಂಗಡವಾಗಿ ಹಣ ಪಡೆದು, ಆ ಚಿತ್ರ ಅರ್ಧಕ್ಕೋ ಅಥವಾ ಮತ್ತ್ಯಾವುದೋ ಕಾರಣಕ್ಕೆ ಆರಂಭವಾಗದೆ ಇದ್ದರೆ ಮುಂಗಡ ಹಣವನ್ನು ಮತ್ತೆ ತಿರುಗಿ ನೀಡುವುದು ತೀರಾ ಕಡಿಮೆ ಎನ್ನಲಾಗುತ್ತದೆ. ಈ ವಿಷಯವಾಗಿಯೇ ಪುನೀತ್ ಅವರ ಪತ್ನಿ ಅಶ್ವಿನಿ ಎಲ್ಲರಿಗೂ ಮಾದರಿಯಾಗಿ ಮೆಚ್ಚುಗೆ ಗಳಿಸುತ್ತಿದ್ದಾರೆ.
BIG BREAKING: ಮತಾಂತರ ನಿಷೇಧ ಕಾಯ್ದೆ ಅಂಗೀಕಾರವಾದ ಬೆನ್ನಲ್ಲೇ BSY ಮಹತ್ವದ ಹೇಳಿಕೆ; ವಿಧೇಯಕಕ್ಕೆ RSS ಸಹಕಾರವೂ ಇದೆ
ಅಪ್ಪು ಅವರ ಡೈರಿಯನ್ನು ಪತ್ನಿ ಅಶ್ವಿನಿ ನೋಡಿದಾಗ ಪುನೀತ್ ಕೆಲವು ಚಿತ್ರಗಳಿಗೆ ಸಹಿ ಮಾಡಿ ಮುಂಗಡ ಹಣ ಪಡೆದುಕೊಂಡಿರುವುದು ತಿಳಿದು ಬಂದಿದೆ. ಕೂಡಲೇ ಅಶ್ವಿನಿ ಅವರು ಆ ಚಿತ್ರದ ನಿರ್ಮಾಪಕರಿಗೆ ಪುನೀತ್ ಪಡೆದುಕೊಂಡಿದ್ದ ಮುಂಗಡ ಹಣವನ್ನು ಮರಳಿ ನೀಡಿದ್ದಾರೆ ಎನ್ನಲಾಗಿದೆ. ಸದ್ಯ ಅವರು ಹಣ ನೀಡಿರುವ ವಿಷಯ ಬಹಿರಂಗವಾಗಿದ್ದು, ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.