alex Certify ಬಿಇಎಲ್‌ನಲ್ಲಿ ಖಾಲಿ ಇವೆ ಹುದ್ದೆಗಳು: ಇಲ್ಲಿದೆ ಅರ್ಜಿ ಸಲ್ಲಿಸುವ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಇಎಲ್‌ನಲ್ಲಿ ಖಾಲಿ ಇವೆ ಹುದ್ದೆಗಳು: ಇಲ್ಲಿದೆ ಅರ್ಜಿ ಸಲ್ಲಿಸುವ ವಿವರ

ಭಾರತ್‌ ಎಲೆಕ್ಟ್ರಾನಿಕ್ಸ್‌ ನಿಯಮಿತ (ಬಿಇಎಲ್) ತನ್ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಬಿಇಎಲ್‌ನ ಜಾಲತಾಣ (www.bel-india.in) ಪ್ರಕಟಿಸಿರುವ ಜಾಹೀರಾತುಗಳ ಪ್ರಕಾರ ಹೈದರಾಬಾದ್‌ ಘಟಕದಲ್ಲಿ ’ಟ್ರೇನೀ’ ಮತ್ತು ’ಪ್ರಾಜೆಕ್ಟ್‌’ ಇಂಜಿನಿಯರ್‌ಗಳ 80ರಷ್ಟು ಹುದ್ದೆಗಳಿಗೆ ನೇಮಕಾತಿ ಹಮ್ಮಿಕೊಳ್ಳಲಾಗುವುದು.

ತೆರವಾಗಿರುವ ಹುದ್ದೆಗಳ ಪಟ್ಟಿ ಇಂತಿದೆ:

* ಟ್ರೇನೀ ಇಂಜಿನಿಯರ್‌ – (ಎಲೆಕ್ಟ್ರಾನಿಕ್ಸ್) — 19

* ಟ್ರೇನೀ ಇಂಜಿನಿಯರ್‌ – (ಮೆಕ್ಯಾನಿಕಲ್) — 11

* ಟ್ರೇನೀ ಇಂಜಿನಿಯರ್‌ -(ಕಂಪ್ಯೂಟರ್‌ ವಿಜ್ಞಾನ) -03

* ಪ್ರಾಜೆಕ್ಟ್‌ ಇಂಜಿನಿಯರ್‌ – (ಎಲೆಕ್ಟ್ರಾನಿಕ್ಸ್) — 36

* ಪ್ರಾಜೆಕ್ಟ್ ಇಂಜಿನಿಯರ್‌ – (ಮೆಕ್ಯಾನಿಕಲ್) — 08

* ಪ್ರಾಜೆಕ್ಟ್‌ ಇಂಜಿನಿಯರ್‌ – (ಕಂಪ್ಯೂಟರ್‌ ವಿಜ್ಞಾನ) – 06

* ಪ್ರಾಜೆಕ್ಟ್ ಇಂಜಿನಿಯರ್‌ – (ಎಲೆಕ್ಟ್ರಿಕಲ್) — 01

ಕಾರಿನಲ್ಲಿ ಸಿಗುವ ವೈಶಿಷ್ಟ್ಯವನ್ನು ಸ್ಕೂಟರ್ ಗೆ ನೀಡಿ ಗಮನ ಸೆಳೆದ ಹೀರೋ

ವಯೋಮಿತಿ

* ಟ್ರೇನೀ ಇಂಜಿನಿಯರ್‌‌ — 25 ವರ್ಷಗಳು

* ಪ್ರಾಜೆಕ್ಟ್‌ ಇಂಜಿನಿಯರ್‌ — 28 ವರ್ಷಗಳು

ವೇತನ

ಟ್ರೇನೀ ಇಂಜಿನಿಯರ್‌ – ಅಭ್ಯರ್ಥಿಗಳನ್ನು ಮೊದಲ ಹಂತದಲ್ಲಿ ಒಂದು ವರ್ಷದ ಮಟ್ಟಿಗೆ ಕೆಲಸದಲ್ಲಿ ಭಾಗಿಯಾಗುವಂತೆ ಮಾಡಲಾಗುತ್ತದೆ. ಇದಾದ ಬಳಿಕ, ಅಗತ್ಯಾನುಸಾರ, ಮೂರು ವರ್ಷಗಳ ಮಟ್ಟಿಗೆ, ಅಭ್ಯರ್ಥಿಯ ಪ್ರದರ್ಶನದ ಆಧಾರದ ಮೇಲೆ ವಿಸ್ತರಣೆ ನೀಡಲಾಗುತ್ತದೆ. ಮೊದಲ ವರ್ಷದಲ್ಲಿ ಮಾಸಿಕ 25,000 ರೂ, ಎರಡನೇ ವರ್ಷ ಮಾಸಿಕ 28,000 ರೂ. ಮತ್ತು ಮೂರನೇ ವರ್ಷ ಮಾಸಿಕ 31,000 ರೂ.ಗಳ ವೇತನ ನೀಡಲಾಗುತ್ತದೆ.

ಪ್ರಾಜೆಕ್ಟ್ ಇಂಜಿನಿಯರ್‌ – ಅಭ್ಯರ್ಥಿಗಳನ್ನು ಮೊದಲಿಗೆ ಎರಡು ವರ್ಷಗಳ ಕಾಲ ಕೆಲಸದಲ್ಲಿ ಭಾಗಿಯಾಗಿಸಲಾಗುತ್ತದೆ. ಬಳಿಕ ಇ‌ನ್ನೂ ನಾಲ್ಕ ವರ್ಷಗಳ ವಿಸ್ತರಣೆ ಮಾಡಬಹುದು. ಮೊದಲ, ಎರಡನೇ ಮತ್ತು ಮೂರನೇ ವರ್ಷಕ್ಕೆ ಕ್ರಮವಾಗಿ ಮಾಸಿಕ 35,000, 40,000 ರೂ. ಮತ್ತು 45,000 ರೂ.ಗಳನ್ನು ನೀಡಿದರೆ ನಾಲ್ಕನೇ ವರ್ಷ ಮಾಸಿಕ 50,000 ರೂ.ಗಳನ್ನು ನೀಡಲಾಗುತ್ತದೆ.

ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು, ಡಿಸೆಂಬರ್‌ 31ರ ಒಳಗೆ ಈ ವಿಳಾಸಕ್ಕೆ ಅಂಚೆ ಮುಖಾಂತರ ಕಳುಹಿಸಬಹುದು — Dy. General Manager (HR), Bharat Electronics Limited, I.E.Nacharam, Hyderabad- 500076, Telangana.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...