ಇಂದಿನಿಂದ ಬಹು ನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಯು ಮುಂಬಾ ತಂಡಗಳ ನಡುವೆ ಫೈಟ್ ನಡೆಯಲಿದೆ.
ಈ ಬಾರಿ ಕಬಡ್ಡಿ ಟೂರ್ನಿಯಲ್ಲಿ ಕೆಲವು ಬದಲಾವಣೆ ಮಾಡಲಾಗಿದ್ದು, ಬಯೋಬಬಲ್ ಮಾದರಿಯಲ್ಲಿ ಲೀಗ್ ಆರಂಭವಾಗಲಿದೆ. ಈ ಬಾರಿ ಕೊರೊನಾದಿಂದಾಗಿ ಒಂದೇ ಪ್ರದೇಶದಲ್ಲಿ ಪಂದ್ಯಗಳು ನಡೆಯಲಿದ್ದು, ಎಲ್ಲ ಪಂದ್ಯಗಳು ಬೆಂಗಳೂರಿನಲ್ಲಿಯೇ ನಡೆಯಲಿವೆ.
ಇಂದಿನ ಎರಡನೇ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಹಾಗೂ ತಮಿಳ್ ತಲೈವಾಸ್, ಮೂರನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ ಹಾಗೂ ಯುಪಿ ಯೋಧಾ ನಡುವೆ ನಡೆಯಲಿದೆ.
ನಟಿ ಶ್ರೀದೇವಿ ಡೈಲಾಗ್ ಗೆ ಲಿಪ್ ಸಿಂಕ್ ಮಾಡಿದ ಯುವತಿ…! ವಿಡಿಯೋ ನೋಡಿ ಬೆರಗಾದ ನೆಟ್ಟಿಗರು
ಟೂರ್ನಿಯಲ್ಲಿ 12 ತಂಡಗಳು ಸಡ್ಡು ಹೊಡೆಯಲಿವೆ. ಇಂದಿನಿಂದ ಜನವರಿ 20ರ ವರೆಗೆ 66 ಪಂದ್ಯಗಳು ಮೊದಲ ಹಂತದಲ್ಲಿ ನಡೆಯಲಿವೆ. ಒಟ್ಟಾರೆ ಟೂರ್ನಿಯಲ್ಲಿ 137 ಪಂದ್ಯಗಳು ನಡೆಯಲಿವೆ. 6 ತಂಡಗಳು ಪ್ಲೇ ಆಫ್ ಹಂತ ತಲುಪಲಿದ್ದು, ಎರಡು ತಂಡಗಳು ಕ್ವಾಲಿಫೈಯರ್ ಗೆ ಪ್ರವೇಶಿಸಿದರೆ, ನಾಲ್ಕು ತಂಡಗಳು ಎಲಿಮಿನೇಟರ್ ಹಂತದಲ್ಲಿ ಸೆಣಸಲಿವೆ.
ಈ ಬಾರಿಯ ಟೂರ್ನಿ ಹೆಚ್ಚು ಕುತೂಹಲದಿಂದ ಕೂಡಿದೆ. ಏಕೆಂದರೆ ಈ ಬಾರಿ ಬಹುತೇಕ ಆಟಗಾರರು ಹಿಂದೆ ಇದ್ದ ತಂಡ ಬಿಟ್ಟು ಬೇರೆ ತಂಡಗಳನ್ನು ಸೇರಿಕೊಂಡಿದ್ದಾರೆ. ಸಹಜವಾಗಿ ಯಾರು ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂಬ ಚರ್ಚೆಗಳು ಆರಂಭವಾಗಿವೆ.