ಮನುಷ್ಯ ಮನುಷ್ಯರ ನಡುವೆ ದ್ವೇಷ ಇದೆ ಅನ್ನೋದನ್ನು ಕೇಳಿದ್ದೇವೆ ನೋಡಿಯೂ ಇದ್ದೇವೆ. ಆದರೆ ಪ್ರಾಣಿಗಳ ನಡುವೆಯೂ ದ್ವೇಷ ಹಾಗೂ ಸೇಡು ಇರುತ್ತೆ ಎಂಬ ವಿಚಾರವು ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದ ಘಟನೆಯೊಂದು ಸಾಬೀತುಪಡಿಸಿದೆ.
ಕೆಲ ಸಮಯದ ಹಿಂದೆ ಶ್ವಾನಗಳ ಗುಂಪು ಕೋತಿ ಮರಿಯೊಂದನ್ನು ಸಾಯಿಸಿತ್ತು. ಇದೇ ದ್ವೇಷವನ್ನು ಇಟ್ಟುಕೊಂಡಿರುವ ಮಂಗಗಳು ಕಂಡಕಂಡಲ್ಲಿ ನಾಯಿ ಮರಿಗಳನ್ನು ಕೊಂದು ಹಾಕುತ್ತಿವೆಯಂತೆ. ಮೇಲಿನಿಂದ ಕೆಳಗೆ ಬಿಸಾಡುವ ಮೂಲಕ ಕೋತಿಗಳು ಕಳೆದ 1 ತಿಂಗಳಿನಿಂದ ಏನಿಲ್ಲ ಅಂದರೂ 250 ನಾಯಿ ಮರಿಗಳನ್ನು ಸಾಯಿಸಿವೆಯಂತೆ…!
ಈ ವಿಚಿತ್ರ ಘಟನೆಯು ಬೀಡ್ ಜಿಲ್ಲೆಯ ಮಜಲ್ಗಾಂವ್ ಎಂಬಲ್ಲಿ ನಡೆದಿದೆ. ಈ ಗ್ರಾಮದಲ್ಲಿರುವ ಕೋತಿಗಳು ಎಲ್ಲಿಯಾದರೂ ನಾಯಿ ಮರಿಗಳನ್ನು ನೋಡಿದರೆ ಅಂದರೆ ಸಾಕು ಅವನ್ನು ಎತ್ತಿಕೊಂಡು ಎತ್ತರದ ಸ್ಥಳಕ್ಕೆ ತೆರಳಿ ಅಲ್ಲಿಂದ ಬಿಸಾಡಿ ಸಾಯಿಸುತ್ತಿವೆ.
ಮಜಲ್ಗಾಂವ್ನಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿರುವ ಲಾವೂಲ್ ಎಂಬ ಗ್ರಾಮದಲ್ಲಿ ಸುಮಾರು 5000 ಜನರು ವಾಸವಿದ್ದಾರೆ. ಈ ಗ್ರಾಮದಲ್ಲಿ ಒಂದೇ ಒಂದು ನಾಯಿಮರಿ ಉಳಿದಿಲ್ಲ. ಗ್ರಾಮಸ್ಥರು ಕೋತಿಗಳನ್ನು ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಆದರೆ ಅರಣ್ಯ ಇಲಾಖೆಗೆ ಒಂದೇ ಒಂದು ಕೋತಿಯನ್ನು ಹಿಡಿಯಲು ಸಾಧ್ಯವಾಗಿಲ್ಲ.