
ಭಾರತೀಯ ಆಟೋಮೊಬೈಲ್ ಬಳಕೆದಾರರಲ್ಲಿ ಸುರಕ್ಷತೆ ಕುರಿತಂತೆ ಹೆಚ್ಚಿನ ಜಾಗೃತಿ ಮೂಡುತ್ತಿದ್ದು, ಸೇಫ್ಟಿ ಫೀಚರ್‌ಗಳು ಚೆನ್ನಾಗಿರುವ ಕಾರುಗಳನ್ನು ಖರೀದಿ ಮಾಡಲು ಹೆಚ್ಚಾಗಿ ಖರ್ಚು ಮಾಡಲು ಹಿಂದೇಟು ಹಾಕುವುದಿಲ್ಲ ಎಂದು ಮೊಬಿಲಿಟಿ ಔಟ್‌ಲುಕ್‌ನ ವರದಿಯೊಂದು ತಿಳಿಸಿದೆ.
ಸಮೀಕ್ಷೆಯಲ್ಲ ಭಾಗಿಯಾದವರಲ್ಲಿ 1/3ರಷ್ಟು ಮಂದಿ, ತಾವು ಸುಧಾರಿತ ಸುರಕ್ಷತಾ ವ್ಯವಸ್ಥೆಗಳಿಗಾಗಿ 30,000 ರೂ.ಗಳಷ್ಟು ಹೆಚ್ಚು ದುಡ್ಡು ಖರ್ಚು ಮಾಡಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ.
ಕಾರ್‌ಟ್ರೇಡ್ ಟೆಕ್‌ನ ಅಂಗವಾದ ಮೊಬಿಲಿಟಿ ಔಟ್‌ಲುಕ್ ಈ ಸರ್ವೇಗಾಗಿ ದೇಶಾದ್ಯಂತ 2.7 ಲಕ್ಷ ಗ್ರಾಹಕರನ್ನು ಪ್ರಶ್ನಿಸಿದೆ.
ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ: ಮಾನ ಕಳ್ಳಸಾಗಣೆ ಜಾಲ ಪತ್ತೆ…?
ಸಮೀಕ್ಷೆಯಲ್ಲಿ ಭಾಗಿಯಾದವರ ಪೈಕಿ 3/4ರಷ್ಟು ಮಂದಿ 4-5 ಸ್ಟಾರ್ ರೇಟಿಂಗ್‌ನ ಸುರಕ್ಷತಾ ವ್ಯವಸ್ಥೆಗಳಿರುವ ವಾಹನಗಳನ್ನು ಭವಿಷ್ಯದಲ್ಲಿ ಖರೀದಿ ಮಾಡಲು ಇಚ್ಛಿಸಿದ್ದು, ಸುರಕ್ಷತೆಗಾಗಿ ತಮ್ಮ ಬಜೆಟ್‌ನ್ನು ಹಿಗ್ಗಿಸಲು ಸಿದ್ಧರಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ವೇಳೆ, 27%ನಷ್ಟು ಪ್ರತಿಕ್ರಿಯಾದಾರರಲ್ಲಿ ವಾಹನದ ಸೇಫ್ಟಿ ಫೀಚರ್‌ಗಳ ಬಗ್ಗೆ ಅರಿವೇ ಇಲ್ಲದಿರುವುದು ಕಳವಳದ ವಿಚಾರವಾಗಿದೆ.
ಬಳಕೆ ಮಾಡಿದ ವಾಹನಗಳಿಗಿಂತ ಹೊಸದಾಗಿ ಖರೀದಿ ಮಾಡಿದ ವಾಹನಗಳಲ್ಲಿ ಇನ್ನಷ್ಟು ಉತ್ತಮವಾದ ಸುರಕ್ಷತವಾ ವ್ಯವಸ್ಥೆಗಳಿಗೆ ಎಂದು 45% ಮಂದಿ ಅಭಿಪ್ರಾಯ ಪಟ್ಟಿದ್ದಾರೆ.
ದೇಶದ ಮೆಟ್ರೋ ಹಾಗೂ ಮೆಟ್ರೋಯೇತರ ನಗರಗಳಲ್ಲಿರುವ ವಾಹನಗಳ ಮಾಲೀಕರು ಹಾಗೂ ವಾಹನಗಳ ಖರೀದಿ ಮಾಡಲು ಪ್ಲಾನ್ ಮಾಡುತ್ತಿರುವ ಮಂದಿಯಿಂದ ಸರ್ವೇಯಲ್ಲಿ ಪ್ರತಿಕ್ರಿಯೆಗಳನ್ನು ಪಡೆಯಲಾಗಿದೆ.