ಉತ್ತರ ಪ್ರದೇಶದ ಲೋಖಾರಿ ಗ್ರಾಮದ ದೇವಸ್ಥಾನದಿಂದ 40 ವರ್ಷಗಳ ಹಿಂದೆ ಕದಿಯಲಾಗಿದ್ದ ಯೋಗಿಣಿ ದೇವಿಯ ಮೂರ್ತಿ ಬಿಟನ್‌ನ ಗ್ರಾಮವೊಂದರ ಮನೆಯೊಂದರಲ್ಲಿ ಪತ್ತೆಯಾಗಿದ್ದು, ಶೀಘ್ರವೇ ಭಾರತಕ್ಕೆ ಮರಳಿ ಬರಲಿದೆ.
ಹಿಂದೂ ಧರ್ಮದಲ್ಲಿ ಹೆಣ್ಣಿನ ಪೂಜೆಯ ಸಂಬಂಧ ಮಹತ್ವದ ಪಾತ್ರ ಹೊಂದಿರುವ ಯೋಗಿಣಿಯ ಈ ಮೂರ್ತಿಯ 8ನೇ ಶತಮಾನಕ್ಕೆ ಸೇರಿದ್ದು, ಬಂಡಾ ಜಿಲ್ಲೆಯ ಲೋಖಾರಿ ಗ್ರಾಮದಿಂದ 1980ರ ದಶಕದಲ್ಲಿ ಕಳುವಾಗಿತ್ತು.
ಪ್ರಾಚೀನ ಕಾಲದ ಈ ಕಲಾಕೃತಿಯನ್ನು ಮರಳಿ ಭಾರತಕ್ಕೆ ಕಳುಹಿಸಲು ಅಗತ್ಯವಿರುವ ಎಲ್ಲಾ ಔಪಚಾರಿಕತೆಗಳನ್ನು ಪೂರೈಸುತ್ತಿರುವುದಾಗಿ ಲಂಡನ್‌ನಲ್ಲಿರುವ ಭಾರತದ ರಾಯಭಾರ ಕಾರ್ಯಾಲಯ ಖಾತ್ರಿ ಪಡಿಸಿದೆ. ಮುಂದಿನ ಕೆಲ ತಿಂಗಳಲ್ಲಿ ಮೂರ್ತಿ ಭಾರತಕ್ಕೆ ಬರಲಿದೆ.