ಕೋಲ್ಕತ್ತಾದಲ್ಲಿ ಹಮ್ಮಿಕೊಂಡಿದ್ದ ವಿವಾಹ ಸಮಾರಂಭವೊಂದರಲ್ಲಿ, ಮದುಮಗಳು ತನ್ನ ಭಾವಿ ಪತಿಯ ಹಣೆಗೆ ಸಿಂಧೂರವಿಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಶಾಲಿನಿ ಸೆನ್ ಹೆಸರಿನ ಮದುಮಗಳು ತನ್ನ ಪತಿ ಅಂಕಣ್ ಮಜುಂದಾರ್ ಹಣೆಗೆ ಹೀಗೆ ಸಿಂಧೂರವಿಟ್ಟಿದ್ದಾರೆ.
ಶಾಲಿನಿ ಹಾಗೂ ಅಂಕಣ್ ಡಿಸೆಂಬರ್ 2ರಂದು ಮದುವೆಯಾಗಿದ್ದಾರೆ. ಈ ಮದುವೆಯ ಶಾಸ್ತ್ರಗಳ ಫೋಟೋಗಳು ಹಾಗೂ ವಿಡಿಯೋಗಳು ಫೇಸ್ಬುಕ್ನಲ್ಲಿ ಶೇರ್ ಮಾಡಿ ಅವೀಗ ವೈರಲ್ ಆಗಿವೆ.
ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಶಾಲೆ: ವರ್ಗಾವಣೆಯಾದ ಶಿಕ್ಷಕನಿಗೆ ಬೀಳ್ಕೊಡುಗೆ ವೇಳೆ ಬಿಕ್ಕಿ ಬಿಕ್ಕಿ ಅತ್ತ ಮಕ್ಕಳು, ಸಹೋದ್ಯೋಗಿಗಳು
ಮೂವರು ಅರ್ಚಕರಿಂದ ಮಂತ್ರ ಪಠಿಸಲ್ಪಟ್ಟ ಈ ಮದುವೆಯಲ್ಲಿ ಹಸನ್ಮುಖಿ ಮದುಮಗಳು ತನ್ನ ಪತಿಯ ಹಣೆಯ ಮೇಲೆ ಸಿಂಧೂರ ತಿಲಕವಿಡುತ್ತಿರುವಂತೆಯೇ ಅತಿಥಿಗಳು ಇಬ್ಬರಿಗೂ ಚಿಯರ್ ಮಾಡುವುದನ್ನು 11-ಸೆಕೆಂಡ್ಗಳ ವಿಡಿಯೋದಲ್ಲಿ ನೋಡಬಹುದಾಗಿದೆ. ಮದುವೆಯ ಮಂತ್ರಗಳನ್ನು ಸಂಸ್ಕೃತದಲ್ಲಿ ಮಾತ್ರವಲ್ಲದೇ ಬೆಂಗಾಲಿಯಲ್ಲೂ ಪಠಿಸಲಾಯಿತು.
ಮದುವೆ ಸಮಾರಂಭದಲ್ಲಿ ಕನ್ಯಾದಾನ ಸಂಪ್ರದಾಯವನ್ನು ಕೈ ಬಿಡಲಾಗಿದೆ.
https://youtu.be/Ro7Sa8u_rgU