ಮೈಸೂರು: ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ನಿಂದ ಟಿಕೆಟ್ ಕೈತಪ್ಪಲು ಮೈಸೂರು ಮಹಾರಾಜರು ಕಾರಣ ಎಂದು ಹೇಳುವ ಮೂಲಕ ಎಂ ಎಲ್ ಸಿ ಸಂದೇಶ್ ನಾಗರಾಜ್ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಂದೇಶ್ ನಾಗರಾಜ್, ಜೆಡಿಎಸ್ ನಾಯಕರೇ ನನ್ನ ಮನೆಗೆ ಬಂದು ಬಿ ಫಾರ್ಮ್ ಕೊಟ್ಟು ಹೋಗಿದ್ದರು. ಆದರೆ ಅಪ್ಪ-ಮಗ ಕಿತ್ತಾಡಿಕೊಂಡು ನನಗೆ ಅಪಮಾನ ಮಾಡಿದರು. ಬಳಿಕ ಮೈಸೂರು ಮಹಾರಾಜರ ಮಾತು ಕೇಳಿ ನನಗೆ ಟಿಕೆಟ್ ಕೊಡಲಿಲ್ಲ ಎಂದರು.
ಕಳ್ಳರಿಂದ ಕೆಜಿಗಟ್ಟಲೇ ಚಿನ್ನ ವಶಪಡಿಸಿಕೊಂಡ ಪೊಲೀಸರು
ಇದೇ ವೇಳೆ ಮೈಸೂರು ಮಹಾರಾಜ ಎಂದರೆ ಚಾಮರಾಜ ಒಡೆಯರ್ ಅಲ್ಲ ಎಂದು ಸ್ಪಷ್ಟಪಡಿಸಿರುವ ಸಂದೇಶ್ ನಾಗರಾಜ್, ನಮ್ಮಂತವರಲ್ಲೇ ಒಬ್ಬರು ಮಹಾರಾಜರಿದ್ದಾರೆ. ಜೆಡಿಎಸ್ ನಲ್ಲಿ ಅವರೇ ಮಂತ್ರಿ, ಸೇನಾಧಿಪತಿ ಎಲ್ಲಾ……ಕೊನೆಗೆ ಅವರೊಬ್ಬರೇ ಪಕ್ಷದಲ್ಲಿ ಉಳಿದುಕೊಳ್ಳಲಿದ್ದಾರೆ ಎಂದು ಶಾಸಕ ಸಾ.ರಾ. ಮಹೇಶ್ ಹೆಸರು ಹೇಳದೆಯೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.