ಮಧ್ಯ ಪ್ರದೇಶದ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು ಕಳುಹಿಸಿದ್ದು, ಎನ್ನಲಾದ ಸುತ್ತೋಲೆಯೊಂದು ಅಧಿಕೃತ ಆದೇಶವಲ್ಲ ಎಂದು ಕಂಡುಬಂದ ಮೇಲೆ ಸಂಭವನೀಯ ಘರ್ಷಣೆಯೊಂದು ತಪ್ಪಿದೆ.
ರಾಜ್ಯ ಕಾಟ್ನಿಯ ಎಸ್ಪಿ ಸುನೀಲ್ ಜೈನ್ ಅವರು ಸಹಿ ಮಾಡಿದ್ದಾರೆ ಎನ್ನಲಾದ ಭದ್ರತಾ ಸುತ್ತೋಲೆಯಲ್ಲಿ, “ಸಿಖ್ಖರು, ಮುಸ್ಲಿಮರು, ಜೆಕೆಎಲ್ಎಫ್, ಉಲ್ಫಾ, ಸಿಮಿ ಹಾಗೂ ಎಲ್ಟಿಟಿಇ ಭಯೋತ್ಪಾದಕರ ಮೇಲೆ ಕಟ್ಟೆಚ್ಚರ ಇರಲಿ,” ಎಂದಿದ್ದಾರೆ ಎನ್ನಲಾಗಿದೆ.
ಕಳ್ಳರಿಂದ ಕೆಜಿಗಟ್ಟಲೇ ಚಿನ್ನ ವಶಪಡಿಸಿಕೊಂಡ ಪೊಲೀಸರು
ಇದೀಗ ಈ ಕುರಿತು ಸಮರ್ಥನೆ ನೀಡಿದ ಜೈನ್, ಗುಮಾಸ್ತರ ಮಟ್ಟದಲ್ಲಿ ಆಗಿರುವ ಪ್ರಮಾದ ಇದಾಗಿದೆ ಎಂದಿದ್ದು, ಸಂಬಂಧಪಟ್ಟ ಗುಮಾಸ್ತನಿಗೆ ಶೋ-ಕಾಸ್ ನೊಟೀಸ್ ಕಳುಹಿಸಿದ್ದಾರೆ.
“ಈ ಗುಮಾಸ್ತನ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು. ಈ ಪ್ರಮಾದದ ಬಗ್ಗೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಯಾವುದೇ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡುವ ಉದ್ದೇಶ ನಮ್ಮದಲ್ಲ,” ಎಂದು ಕಾಟ್ನಿ ಎಸ್ಪಿ ತಿಳಿಸಿದ್ದಾರೆ.