ಪೇಟಿಎಂನ ಪೇಮೆಂಟ್ಸ್ ಬ್ಯಾಂಕ್‌ಗೆ ಪರಿಶಿಷ್ಠ ಬ್ಯಾಂಕ್‌ನ ಸ್ಥಾನಮಾನವನ್ನು ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕೊಡಮಾಡಿದೆ. 1934ರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯಿದೆಯ ಎರಡನೇ ಶೆಡ್ಯೂಲ್‌ನಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅನ್ನು ಒಳಗೊಳ್ಳಲಾಗಿದೆ.
ಮೇಲ್ಕಂಡ ಸ್ಥಾನಮಾನದ ಮೂಲಕ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಈಗ ಉದ್ಯಮದಲ್ಲಿ ಹೊಸ ಸಾಧ್ಯತೆಗಳನ್ನು ಶೋಧಿಸಬಹುದಾಗಿದೆ ಎಂದು ಕಂಪನಿಯ ಪತ್ರಿಕಾ ಪ್ರಕಟಣೆಯೊಂದರಲ್ಲಿ ತಿಳಿಸಲಾಗಿದೆ.
“ಸರ್ಕಾರೀ ಹಾಗೂ ಇತರ ದೊಡ್ಡ ಕಾರ್ಪೋರೇಷನ್‌ಗಳು ವಿತರಿಸುವ ಪ್ರಸ್ತಾವನೆಗಾಗಿ ಮನವಿಗಳು (ಆರ್‌ಎಫ್‌ಪಿ), ಪ್ರಾಥಮಿಕ ಹರಾಜುಗಳು, ಸ್ಥಿರ ದರ ಹಾಗೂ ಅಸ್ಥಿರ ರೆಪೋ ದರಗಳು, ಹಿಮ್ಮುಖ ರೆಪೋಗಳಲ್ಲಿ, ಮಾರ್ಜಿನಲ್ ಸ್ಟಾಂಡಿಂಗ್ ಸೌಲಭ್ಯದೊಂದಿಗೆ, ಬ್ಯಾಂಕ್ ಭಾಗಿಯಾಗಬಹುದಾಗಿದೆ,” ಎಂದು ಪ್ರಕಟಣೆ ತಿಳಿಸುತ್ತಿದೆ.
ನೋಡಿದವರ ಬಾಯಲ್ಲಿ ನೀರೂರಿಸುತ್ತೆ ಪಫ್ ಪೇಸ್ಟ್ರಿ ಪಿಜ್ಜಾ….!
ಆರ್‌ಬಿಐ ಕಾಯಿದೆ, 1934ರ ಅನ್ವಯ, ತನ್ನ ಠೇವಣಿದಾರರ ಹಿತಾಸಕ್ತಿಗಳಿಗೆ ಧಕ್ಕೆಯಾಗದಂತೆ ವ್ಯವಹಾರಗಳನ್ನು ನಡೆಸಿಕೊಂಡು ಹೋಗುವ ವಿಚಾರದಲ್ಲಿ ಆರ್.ಬಿ.ಐ. ಮಾನದಂಡಗಳನ್ನು ತೃಪ್ತಿಪಡಿಸಿದಲ್ಲಿ, ಅಂಥ ಬ್ಯಾಂಕುಗಳು ಎರಡನೇ ಶೆಡ್ಯೂಲ್ ಸ್ಥಾನಮಾನ ಪಡೆಯಬಹುದಾಗಿದೆ.
ದೇಶದ ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಅತಿ ದೊಡ್ಡ ಸೇವಾದಾರರಲ್ಲಿ ಒಂದಾದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ 2017ರಲ್ಲಿ ಆರಂಭಗೊಂಡಿದ್ದು, ಮಾರ್ಚ್ 31, 2021ರಂತೆ 6.4 ಕೋಟಿಯಷ್ಟು ಉಳಿತಾಯ ಖಾತೆಗಳು, 5,200 ಕೋಟಿ ಹೂಡಿಕೆಗಳನ್ನು ಹೊಂದಿದೆ.