ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) 1.32 ಲಕ್ಷ ಕೋಟಿ ರೂಪಾಯಿಗಳಷ್ಟು ರೀಫಂಡ್ ಅನ್ನು 1.19 ಕೋಟಿಯಷ್ಟು ತೆರಿಗೆದಾರರ ಖಾತೆಗಳಿಗೆ ಏಪ್ರಿಲ್ 1, 2021ರಿಂದ ಡಿಸೆಂಬರ್ 6, 2021ರ ನಡುವೆ ಹಿಂದಿರುಗಿಸಿದ್ದಾಗಿ ತಿಳಿಸಿದೆ.
ರೀಫಂಡ್ ಆಗಿರುವ ದುಡ್ಡಿನಲ್ಲಿ ವೈಯಕ್ತಿಕ ಆದಾಯ ತೆರಿಗೆ ರೀಫಂಡ್ ರೂಪದಲ್ಲಿ 1.17 ಕೋಟಿ ಪ್ರಕರಣಗಳಲ್ಲಿ 44,207 ಕೋಟಿ ರೂಪಾಯಿಗಳು; ಕಾರ್ಪೋರೇಟ್ ತೆರಿಗೆ ರೀಫಂಡ್ ರೂಪದಲ್ಲಿ 1,99,481 ಕೇಸುಗಳಲ್ಲಿ 88,174 ಕೋಟಿ ರೂ.ಗಳನ್ನು ಹಿಂದಿರುಗಿಸಿರುವುದಾಗಿ ಆದಾಯ ತೆರಿಗೆ ಸಂಸ್ಥೆ ತಿಳಿಸಿದೆ. ಇವುಗಳಲ್ಲಿ 2021-22ರ ಅಸೆಸ್ಮೆಂಟ್ ವರ್ಷದ 17,266.48 ಕೋಟಿ ರೂಪಾಯಿಗಳೂ ಸೇರಿವೆ.
ಭತ್ತ ಕೊಯ್ಲು ವೇಳೆಯಲ್ಲೇ ಬೆಚ್ಚಿಬಿದ್ದ ಚಾಲಕ, ದಿಢೀರ್ ಎದುರಾದ ಮೊಸಳೆ ಕಂಡು ಕಾಲ್ಕಿತ್ತ
ಫೈಲಿಂಗ್ ಆದ 10 ದಿನಗಳಲ್ಲಿ ರೀಫಂಡ್ಗಳ ಸಂಸ್ಕರಣೆಯಾಗುತ್ತದೆ. ಇದೇ ವೇಳೆ, ನಿಮ್ಮ ರೀಫಂಡ್ ಮನವಿಯ ಸ್ಟೇಟಸ್ ಅನ್ನು, ನಿಮ್ಮ ಪಾನ್ ಸಂಖ್ಯೆ ಬಳಸಿಕೊಂಡು ಆದಾಯ ತೆರಿಗೆಯ ಅಧಿಕೃತ ಜಾಲತಾಣ incometax.gov.inದಲ್ಲಿ ಪರಿಶೀಲಿಸಬಹುದಾಗಿದೆ. ಸಾಮಾನ್ಯವಾಗಿ ತೆರಿಗೆ ರಿಟರ್ನ್ಸ್ನಲ್ಲಿ ಸಲ್ಲಿಸಿರುವ ವಿವರಗಳಿಗೂ ತೆರಿಗೆ ಇಲಾಖೆ ಬಳಿ ಇರುವ ದಾಖಲೆಗಳಿಗೂ ಹೊಂದಾಣಿಕೆ ಇಲ್ಲದೇ ಇದ್ದಲ್ಲಿ ಹೀಗೆ ತಡವಾಗುತ್ತದೆ. ಐಟಿಆರ್ ಅರ್ಜಿಯಲ್ಲಿ ಬ್ಯಾಂಕ್ ಖಾತೆಗಳನ್ನು ತಪ್ಪಾಗಿ ನೀಡಿದ ಪಕ್ಷದಲ್ಲೂ ತೆರಿಗೆ ರೀಫಂಡ್ಗಳನ್ನು ಹಿಡಿದಿಡಲಾಗುತ್ತದೆ.
ರೀಫಂಡ್ ಸ್ಟೇಟಸ್ ಅನ್ನು ಪರಿಶೀಲಿಸಿ ನೋಡಲು ಹೀಗೆ ಮಾಡಿ
* ಎನ್ಎಸ್ಡಿಎಲ್ ಜಾಲತಾಣಕ್ಕೆ ಭೇಟಿ ನೀಡಿ.
* ವೆಬ್ ಪುಟದಲ್ಲಿ, ಪಾನ್ ಹಾಗೂ ಎವೈ ಸೇರಿದಂತೆ ಅಗತ್ಯ ವಿವರಗಳನ್ನು ಭರ್ತಿ ಮಾಡಿ, ‘Proceed’ ಮೇಲೆ ಕ್ಲಿಕ್ ಮಾಡಿ.
* ನಿಮ್ಮ ಆದಾಯ ತೆರಿಗೆ ರೀಫಂಡ್ ಸ್ಟೇಟಸ್ ಅನ್ನು ಈಗ ನೋಡಬಹುದಾಗಿದೆ.
ಇ-ಫೈಲಿಂಗ್ ಪೋರ್ಟಲ್ನಲ್ಲಿ
* ಆದಾಯ ತೆರಿಗೆಯ ಇ-ಫೈಲಿಂಗ್ ಪೋರ್ಟಲ್ಗೆ ಲಾಗಿನ್ ಆಗಿ.
* View Returns/ Forms ಆಯ್ಕೆ ಮಾಡಿ.
* ‘My Account’ ಟ್ಯಾಬ್ಗೆ ತೆರಳಿ, ‘Income Tax Returns’ ಆಯ್ಕೆ ಮಾಡಿ, ಸಲ್ಲಿಸಿ.
* ಸ್ವೀಕೃತಿ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.
* ನಿಮ್ಮ ರಿಟರ್ನ್ ವರದಿ ಇರುವ ಪುಟದೊಂದಿಗೆ ಆದಾಯ ತೆರಿಗೆ ರಿಟರ್ನ್ಸ್ ಸ್ಟೇಟಸ್ ಕಾಣಿಸಿಕೊಳ್ಳಲಿದೆ.