ಗುಜರಾತ್ನ ರಾಜ್ಕೋಟ್ನಲ್ಲಿ ವ್ಯಕ್ತಿಯೊಬ್ಬ ಸಾವು ಸಂಬಂಧ ಸ್ಥಳೀಯ ಪೊಲೀಸರು 40 ವರ್ಷದ ಮಹಿಳೆ ಹಾಗೂ ಆಕೆಯ 45 ವರ್ಷದ ಪತಿಯನ್ನು ಬಂಧಿಸಿದ್ದಾರೆ.
ಮೃತ ವ್ಯಕ್ತಿಯನ್ನು ಸಂತೋಷ್ ಸೋಲಂಕಿ ಎಂದು ಗುರುತಿಸಲಾಗಿದೆ. ಇವರ ಮೃತದೇಹ ರಾಜಾಕೋಟ್ ಪ್ಯಾರಾ ಪಿಪಾರಿಯಾ ಬಳಿಯಲ್ಲಿ ಸೆಣಬಿನ ಚೀಲದಲ್ಲಿ ಮುಖ ಹಾಗೂ ತಲೆ ಒಡೆದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಪೊಲೀಸರ ವಿಚಾರಣೆ ವೇಳೆ ಸ್ಥಳೀಯರು ಕೇಸರಿ ಬಣ್ಣದ ಬಟ್ಟೆ ತೊಟ್ಟ ವ್ಯಕ್ತಿಯು ಸೋಮವಾರ ಆ ಸ್ಥಳದಲ್ಲಿದ್ದರು ಎಂದು ತಿಳಿದುಬಂದಿದೆ. ಬಳಿಕ ಪೊಲೀಸರು ರಕ್ತದ ಕಲೆಗಳನ್ನು ಪರಿಶೀಲಿಸಿದ್ದಾರೆ. ಹೆಚ್ಚಿನ ತನಿಖೆ ವೇಳೆ ಗೀತಾ ಜಾಧವ್ ಹಾಗೂ ಆಕೆಯ ಪತಿ ಆಟೋ ರಿಕ್ಷಾ ಚಾಲಕ ವಸಂದ್ ಜಾಧವ್ ಈ ಕೊಲೆಯ ಆರೋಪಿಗಳು ಎಂದು ತಿಳಿದುಬಂದಿದೆ.
ಈ ದಂಪತಿ ಕಳೆದೊಂದು ವಾರದಿಂದ ಇದೇ ಏರಿಯಾದಲ್ಲಿ ಗುಡಿಸಲಿನಲ್ಲಿ ವಾಸಿಸುತ್ತಿದ್ದರು. ಸೋಮವಾರ ರಾತ್ರಿ ಸುಮಾರಿಗೆ ಗೀತಾ ತಂದೆ ಅರ್ಜುನ್ ಹಾಗೂ ಸೋಲಂಕಿ ಜಮ್ನಾಗರ್ನಿಂದ ಈ ಗುಡಿಸಲಿಗೆ ಆಗಮಿಸಿದ್ದರು.
ಗೀತಾ ಎಲ್ಲರಿಗೂ ರಾತ್ರಿಯ ಊಟಕ್ಕೆ ವ್ಯವಸ್ಥೆ ಮಾಡಿದ್ದಳು. ಆದರೆ ಸಂತೋಷ್ ಸೋಲಂಕಿ ಆಹಾರ ರುಚಿಯಾಗಿಲ್ಲ ಎಂದು ಕಂಪ್ಲೇಂಟ್ ಮಾಡಿದ್ದಾನೆ. ಇದರಿಂದ ಗೀತಾ ಹಾಗೂ ಸಂತೋಷ್ ನಡುವೆ ವಾದ ತಾರಕಕ್ಕೇರಿದೆ. ಇಷ್ಟಕ್ಕೆ ಕೋಪಗೊಂಡ ಗೀತಾ ಸಂತೋಷ್ ಸೋಲಂಕಿ ತಲೆಗೆ ದೊಡ್ಡ ಕಲ್ಲಿನಿಂದ ಜಜ್ಜಿದ್ದಾರೆ. ಸ್ಥಳದಲ್ಲಿಯೇ ಸಂತೋಷ್ ಸಾವನ್ನಪ್ಪಿದ್ದಾನೆ. ಬಳಿಕ ದಂಪತಿ ಸಂತೋಷ್ ಮೃತದೇಹವನ್ನು ಗೋಣಿ ಚೀಲದಲ್ಲಿ ತುಂಬಿಸಿದ್ದಾರೆ. ಹಾಗೂ ಆಟೋ ರಿಕ್ಷಾದಲ್ಲಿ ಮೃತದೇಹವನ್ನು ಕೊಂಡೊಯ್ದು ಪಾರಾ ಪಿಪಾಲಿಯಾ ಗ್ರಾಮದಲ್ಲಿ ಬಿಸಾಡಿದ್ದಾರೆ ಎನ್ನಲಾಗಿದೆ.