ಶಾಲಾ ಮಕ್ಕಳಿಗೆ ಒತ್ತಾಯಪೂರ್ವಕವಾಗಿ ‘ನಾನು ಬಾಬ್ರಿ’ ಬ್ಯಾಡ್ಜ್ ಅಂಟಿಸಿದ ಪಿಎಫ್ಐ 07-12-2021 3:47PM IST / No Comments / Posted In: Latest News, India, Live News ಬಾಬ್ರಿ ಮಸೀದಿ ಧ್ವಂಸದ ವಾರ್ಷಿಕೋತ್ಸವದ ಅಂಗವಾಗಿ ಶಾಲಾ ಮಕ್ಕಳಿಗೆ ‘ನಾನು ಬಾಬ್ರಿ’ ಎಂಬ ಬ್ಯಾಡ್ಜ್ನ್ನು ವಿತರಿಸಿದ ಆರೋಪದ ಅಡಿಯಲ್ಲಿ ಕೇರಳ ಪೊಲೀಸರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 341, 153 ಎ ಹಾಗೂ 34ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಪಿಕೆ ಕೃಷ್ಣದಾಸ್ ಪತ್ತನಂತಿಟ್ಟ ಜಿಲ್ಲೆಯ ಸೇಂಟ್ ಜಾರ್ಜ್ ಪ್ರೌಢಶಾಲೆಯಲ್ಲಿ ನಡೆದ ಘಟನೆ ಸಂಬಂಧ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಎನ್ಸಿಪಿಸಿಆರ್ಗೆ ಪತ್ರ ಬರೆದಿರುವ ಬಿಜೆಪಿ, ಮುನೀರ್ ಇಬ್ನು ನಜೀರ್ ನೇತೃತ್ವದಲ್ಲಿ ಪಿಎಫ್ಐ ಸದಸ್ಯರು ಶಾಲೆ ಕಡೆಗೆ ತೆರಳುತ್ತಿದ್ದ ಹಿಂದೂ ಹಾಗೂ ಕ್ರಿಶ್ಚಿಯನ್ ಸಮುದಾಯದ 7 ವರ್ಷದೊಳಗಿನ ಮಕ್ಕಳನ್ನೇ ಕರೆದು ಅವರಿಗೆ ನಾನು ಬಾಬ್ರಿ ಬ್ಯಾಡ್ಜ್ನ್ನು ಧರಿಸುವಂತೆ ಒತ್ತಡ ಹೇರಿದ್ದಾರೆ. ಮಕ್ಕಳು ಬ್ಯಾಡ್ಜ್ ಧರಿಸಲು ನಿರಾಕರಿಸಿದರೂ ಸಹ ಒತ್ತಾಯಪೂರ್ವಕವಾಗಿ ಮಕ್ಕಳಿಗೆ ಬ್ಯಾಡ್ಜ್ ಧರಿಸುವಂತೆ ಮಾಡಿದ್ದಾರೆ ಎಂದು ದೂರಿದ್ದಾರೆ. ಈ ರೀತಿ ಮಾಡುವ ಮೂಲಕ ಪಿಎಫ್ಐ ಸಂಘಟನೆ ಹಾಗೂ ಅದರ ಕಾರ್ಯಕರ್ತರು ಶಾಲೆಗೆ ತೆರಳುತ್ತಿದ್ದ ಮಕ್ಕಳ ಹಕ್ಕುಗಳಿಗೆ ಚ್ಯುತಿ ತಂದಿದ್ದಾರೆ. ಮಕ್ಕಳ ಮೂಲಭೂತ ಹಕ್ಕುಗಳಿಗೆ ಭಂಗ ತಂದ ಪಿಎಫ್ಐ ವಿರುದ್ಧ ಎನ್ಸಿಪಿಸಿಆರ್ ಕ್ರಮ ಕೈಗೊಳ್ಳುವುದು ಅತ್ಯಂತ ಅವಶ್ಯಕವಾಗಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ. ಇನ್ನು ಈ ವಿಚಾರವಾಗಿ ಮಾತನಾಡಿದ ಕೇರಳ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್, ಕೇರಳವನ್ನು ಮತ್ತೊಂದು ಸಿರಿಯಾ ಮಾಡಲು ಹೊರಟಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಈ ಘಟನೆ ಸಂಬಂಧ ಸಿಎಂ ಪಿಣರಾಯಿ ವಿಜಯನ್ ಮೌನ ಕೂಡ ಸೂಕ್ತವಲ್ಲ ಎಂದು ಹೇಳಿದ್ದಾರೆ. Is Kerala another Syria in the making? The SDPI is forcefully pasting "I Am Babari" sticker on the students of Chungappara St. George School in Kottangal Panchayat, which is ruled by the @CPIMKerala – SDPI alliance. Why is CM @vijayanpinarayi silent? Condemnable. @AmitShah pic.twitter.com/IT46oVjPN4 — K Surendran(മോദിയുടെ കുടുംബം) (@surendranbjp) December 6, 2021