ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತಿದೆ. ಮಕ್ಕಳಿಗೆ ಬಾಲ್ಯದಲ್ಲೇ ಉತ್ತಮ ಸಂಸ್ಕಾರ ಕಲಿಸಿದ್ರೆ ಬೆಳೆಯುತ್ತಾ ಅವರು ತಮ್ಮ ಸುತ್ತಮುತ್ತಲಿನವರನ್ನು, ಹಿರಿಯರನ್ನು ಗೌರವದಿಂದ ಕಾಣುತ್ತಾ ಜೀವನ ನಡೆಸುತ್ತಾರೆ.
ತಮ್ಮ ಗೆಳೆಯರು ಅಥವಾ ಕುಟುಂಬಸ್ಥರು ಯಾರಾದ್ರೂ ಸಂಕಷ್ಟದಲ್ಲಿದ್ರೆ ಅವರಿಗೆ ಸಕರಾತ್ಮಕವಾಗಿ ಸ್ಪಂದಿಸುವುದು ಮಾನವೀಯ ಗುಣವಾಗಿದೆ. ಇದೀಗ ಇಲ್ಲೊಂದು ವಿಡಿಯೋ ವೈರಲ್ ಆಗಿದ್ದು, ಬಾಲಕನ ಹೃದಯವಂತಿಕೆಗೆ ನೆಟ್ಟಿಗರು ಧನ್ಯತಾಭಾವ ವ್ಯಕ್ತಪಡಿಸಿದ್ದಾರೆ.
ಫೇಸ್ಬುಕ್ ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಮಕ್ಕಳು ಸಾಮೂಹಿಕವಾಗಿ ಊಟಕ್ಕೆ ಕೂತಿದ್ದರೆ. ಇಲ್ಲಿ ವಿಕಲಚೇತನ ಬಾಲಕನೊಬ್ಬನಿಗೆ ಆತನ ಸ್ನೇಹಿತ ಊಟ ಮಾಡಿಸುತ್ತಿರುವ ದೃಶ್ಯ ವೈರಲ್ ಆಗಿದೆ. ತನ್ನ ಸ್ನೇಹಿತನಿಗೆ ತಿನ್ನಲು ಕಷ್ಟವಾದ ಕಾರಣ, ಆತನ ಹಸಿವನ್ನು ಗೆಳೆಯ ನೀಗಿಸಿದ್ದಾನೆ. ಬಾಲಕನ ಹೃದಯವಂತಿಕೆಗೆ ನೆಟ್ಟಿಗರು ಸಲಾಂ ಎಂದಿದ್ದಾರೆ.
ಗೆಳೆಯನ ಅಸಹಾಯಕತೆಗೆ ನಿಜವಾದ ಸ್ಪಂದನೆ ಅಂದ್ರೆ ಇದುವೇ ಅಲ್ವಾ….. ಇಷ್ಟು ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗಿದು ಬದುಕಿನ ಅತೀ ದೊಡ್ಡ ಪಾಠವಾಗಿದೆ. ಗೆಳೆಯನಿಗೆ ತುತ್ತು ತಿನ್ನಿಸುತ್ತಾ, ತಾನು ತಿನ್ನುತ್ತಾ ಕಿಂಚಿತ್ತೂ ಬೇಸರಿಸಿಕೊಳ್ಳದ ಬಾಲಕನ ಹೃದಯವಂತಿಕೆ ನಿಜಕ್ಕೂ ಮೆಚ್ಚುವಂಥದ್ದೇ. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಾಲಕನ ಹೃದಯವೈಶಾಲ್ಯತೆಗೆ ನೆಟ್ಟಿಗರ ಮನಸ್ಸು ಕರಗಿದೆ. ಇದೇ ಅಲ್ವಾ ಉಜ್ವಲ ಭವಿಷ್ಯದ ಸಂಕೇತ ಅಂತೆಲ್ಲಾ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಚಿಕ್ಕಂದಿನಲ್ಲಿ ಈ ರೀತಿಯ ಸದ್ಗುಣ, ನೀತಿಗಳನ್ನು ಬೆಳೆಸುವ ಕ್ರಮ ನಾವು ಮಕ್ಕಳಿಗೆ ಕೊಡುವ ದೊಡ್ಡ ಉಡುಗೊರೆಯಾಗಿದೆ ಎಂದೆಲ್ಲಾ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
https://youtu.be/vLoQGT1OCTQ