ಕೋವಿಡ್ ಪರಿಹಾರ ಸಾಲದಲ್ಲಿ ಐಷಾರಾಮಿ ಲಂಬೋರ್ಗಿನಿ ಕಾರು ಮತ್ತು ರೋಲೆಕ್ಸ್ ಖರೀದಿಸಿದಕ್ಕಾಗಿ ಯುಎಸ್ ನ ವ್ಯಕ್ತಿಯೊಬ್ಬರಿಗೆ 9 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.
ಲೀ ಪ್ರೈಸ್ ಎಂಬಾತ ವಂಚನೆ ಮಾಡಿದಾತ. ಆತ ಕೋವಿಡ್ ಪರಿಹಾರ ಸಾಲದಲ್ಲಿ $ 1.6 ಮಿಲಿಯನ್ (ಸುಮಾರು 12 ಕೋಟಿ ರೂ.) ಹಣ ಪಡೆದು ಐಷಾರಾಮಿ ಕಾರು, ವಸ್ತುಗಳನ್ನು ಖರೀದಿಸಿದ್ದ. 30 ವರ್ಷದ ಲೀ ಪ್ರೈಸ್ ತನ್ನ ವ್ಯವಹಾರಕ್ಕೆ ನಿಧಿಯ ಅಗತ್ಯವಿದೆ ಎಂದು ಹೇಳಿ ಯುಎಸ್ ಸರ್ಕಾರದಿಂದ ದೊಡ್ಡ ಮೊತ್ತದ ಹಣವನ್ನು ಎರವಲು ಪಡೆದಿದ್ದ. ಈ ಹಣವನ್ನು ಐಷಾರಾಮಿ ಜೀವನಕ್ಕಾಗಿ ಖರ್ಚು ಮಾಡಿದ್ದಾರೆ.
ಆದರೆ, ಐಷಾರಾಮಿ ಜೀವನವನ್ನು ಹೊಂದುವ ಈತನ ದೊಡ್ಡ ಯೋಜನೆ ತಲೆಕೆಳಗಾಗಿದೆ. ತಪಾಸಣೆ ವೇಳೆ ಪ್ರಿನ್ಸ್‌ನ ವಂಚನೆ ಬಟಾಬಯಲಾಗಿದ್ದು, ಕೋರ್ಟ್ 9 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಾಲಯದ ದಾಖಲೆಗಳು, ಪ್ರಿನ್ಸ್ ಹಣವನ್ನು ರೋಲೆಕ್ಸ್ ವಾಚ್, ಲಂಬೋರ್ಗಿನಿ ಕಾರು, ಫೋರ್ಡ್ ಎಫ್-350 ಹಾಗೂ ಇತರ ವಸ್ತುಗಳ ಮೇಲೆ ಖರ್ಚು ಮಾಡಿದ್ದನ್ನು ಬಹಿರಂಗಪಡಿಸಿದವು.
ವಂಚಕ ಲೀ ನಿಂದ ಸ್ವಾಧೀನಪಡಿಸಿಕೊಂಡಿರುವ ಒಟ್ಟು ಸಾಲದ ಮೊತ್ತದ $7,00,000 ಗಿಂತ ಹೆಚ್ಚಿನ ಮೊತ್ತವನ್ನು ಅಧಿಕಾರಿಗಳು ಈಗ ವಸೂಲಿ ಮಾಡಿದ್ದಾರೆ. ಇನ್ನು ಇದೇ ರೀತಿ ಹಲವು ಮಂದಿ ವಂಚನೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಟೆಕ್ಸಾಸ್‌ನ ವ್ಯಕ್ತಿಯೊಬ್ಬರು ಎಂಟು ಮನೆಗಳು ಮತ್ತು ಹಲವಾರು ಕಾರುಗಳನ್ನು ಖರೀದಿಸಲು $ 17 ಮಿಲಿಯನ್ ಪರಿಹಾರದ ಮೊತ್ತವನ್ನು ಪಡೆದಿರುವುದಾಗಿ ಆರೋಪಿಸಲಾಗಿದೆ.