alex Certify ಕುಟುಂಬ ರಾಜಕಾರಣ ಬೇಡ ಎಂದರೆ ಕಾನೂನು ಮಾಡಲಿ; ಕಿಡಿಕಾರಿದ ರೇವಣ್ಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಟುಂಬ ರಾಜಕಾರಣ ಬೇಡ ಎಂದರೆ ಕಾನೂನು ಮಾಡಲಿ; ಕಿಡಿಕಾರಿದ ರೇವಣ್ಣ

ಹಾಸನ: ಜೆಡಿಎಸ್ ಕುಟುಂಬ ರಾಜಕಾರಣ ಎಂಬ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಟೀಕೆಗೆ ತಿರುಗೇಟು ನೀಡಿರುವ ಶಾಸಕ ಹೆಚ್.ಡಿ. ರೇವಣ್ಣ, ಕುಟುಂಬ ರಾಜಕಾರಣ ಬೇಡವೆಂದರೆ ಕಾನೂನು ಮಾಡಲಿ ಎಂದು ಗುಡುಗಿದ್ದಾರೆ.

ಹಾಸನದಲ್ಲಿ ಮಾತನಾಡಿದ ರೇವಣ್ಣ, ಬೆಳಿಗ್ಗೆ ಎದ್ದರೆ ನಮ್ಮದು ಕುಟುಂಬ ರಾಜಕಾರಣ ಎಂದು ವ್ಯಂಗ್ಯವಾಡುತ್ತಾರೆ. ಕಾಂಗ್ರೆಸ್ ನಲ್ಲಿ ಕುಟುಂಬ ರಾಜಕಾರಣವಿಲ್ಲವೇ? ಬಿಜೆಪಿಯಲ್ಲಿ ಇಲ್ಲವೇ? ಒಂದೇ ಮನೆಯವರು ಶಾಸಕ, ಎಂಎಲ್ ಸಿ ಆಗಿಲ್ಲವೇ? ಎಂದು ಪ್ರಶ್ನಿಸಿದರು.

BIG NEWS: ಒಮಿಕ್ರಾನ್ ಬಗ್ಗೆ ಆತಂಕದ ಸಂಗತಿ ಬಹಿರಂಗಪಡಿಸಿದ ಆರೋಗ್ಯ ಸಚಿವಾಲಯ

ಜೆಡಿಎಸ್ ನದ್ದು ಕುಟುಂಬ ರಾಜಕಾರಣ ಎಂದು ಹೇಳಲು ಅವರಿಗೆ ನೈತಿಕತೆ ಇಲ್ಲ. ಕುಟುಂಬ ರಾಜಕಾರಣ ಬೇಡವೆಂದರೆ ಸಂಸತ್ ನಲ್ಲಿ ಒಂದು ಕಾನೂನು ಮಾಡಲಿ ಎಂದು ಹೇಳಿದರು.

ಪ್ರಾದೇಶಿಕ ಪಕ್ಷ ಮುಗಿಸಲು ಹೋಗಿ ಕಾಂಗ್ರೆಸ್ ಗೆ ಈ ಸ್ಥಿತಿ ಬಂದಿದೆ. ಕಾಂಗ್ರೆಸ್ ನಾಯಕರಿಂದ ಪಕ್ಷ ಅಧೋಗತಿಗೆ ಬಂದಿದೆ. ಇನ್ನು ಬಿಜೆಪಿ ಒಂದು ಲೂಟಿಕೋರರ ಪಕ್ಷವಾಗಿದೆ ಎಂದು ವಾಗ್ದಾಳಿ ನಡೆಸಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...