ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ, ಸಾರ್ವಜನಿಕರಿಂದ ದಂಡ ವಸೂಲಿ ಮಾಡುವ ಪೊಲೀಸರು ಈಗ ದಂಡ ವಿಧಿಸಲು ಸ್ಮಾರ್ಟ್ ಯೋಜನೆಯೊಂದನ್ನು ತಂದಿದ್ದಾರೆ.
ಈ ಮೂಲಕ, ದಂಡ ವಿಧಿಸುವ ಕಾಯಕಕ್ಕೆ ದಂಡದ ಚಲನ್ಗಳ ದೈಹಿಕ ಪ್ರತಿಗಳನ್ನು ಸವಾರರಿಗೆ ನೀಡಲು ಅಗತ್ಯವಿರುವ ಮಾನವಶಕ್ತಿ ಹಾಗೂ ವೆಚ್ಚವನ್ನು ತಗ್ಗಿಸುವುದು ಬೆಂಗಳೂರು ಸಂಚಾರಿ ಪೊಲೀಸರ ಉದ್ದೇಶವಾಗಿದೆ.
ಎಸ್ಎಂಎಸ್ಗಳ ಮೂಲಕ ಸಂಚಾರಿ ನಿಯಮ ಉಲ್ಲಂಘನೆ ಮಾಡುವ ವಾಹನಗಳ ಸವಾರರಿಗೆ ದಂಡದ ಚಲನ್ ಕಳುಹಿಸುವ ಪೈಲಟ್ ಯೋಜನೆಗೆ ಚಾಲನೆ ಕೊಡಲಾಗಿದ್ದು, ಆರಂಭಿಕ ಯಶಸ್ಸು ಕಂಡಲ್ಲಿ, ಎಲ್ಲೆಡೆ ಈ ಪ್ರವೃತ್ತಿಯ ಮೂಲಕ ದಂಡ ವಿಧಿಸುವ ಆಲೋಚನೆ ಸಂಚಾರಿ ಪೊಲೀಸರದ್ದು. ಎಸ್ಎಂಎಸ್ ಮೂಲಕ ಕಳುಹಿಸುವ ಲಿಂಕ್ನಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಸಾಕ್ಷ್ಯವನ್ನು ಸಹ ಲಗತ್ತಿಸಲಾಗುವುದು.
ಕಿಯಾ ಕಾರ್ನಿವಾಲ್ ಎಂಪಿವಿ ಖರೀದಿಸಿದ ಸೋನು ನಿಗಂ…! ಈ ವಾಹನದ ವಿಶೇಷತೆಯೇನು ಗೊತ್ತಾ…?
ಸದ್ಯದ ಮಟ್ಟಿಗೆ, ಮೋಟಾರು ವಾಹನಗಳ ಕಾಯಿದೆ ಅನುಸಾರ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಮಂದಿಗೆ ಚಲನ್ಗಳ ಪ್ರಿಂಟ್ಔಟ್ಗಳನ್ನು ಅವರ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸುತ್ತಿದ್ದಾರೆ ಸಂಚಾರಿ ಪೊಲೀಸರು. ಬೆಂಗಳೂರಿನಲ್ಲೇ ಪ್ರತಿನಿತ್ಯ ಸರಾಸರಿ 20,000ದಷ್ಟು ಕಾಂಟಾಕ್ಟ್ಲೆಸ್ ನೋಟಿಸ್ಗಳನ್ನು ಕಳುಹಿಸಲಾಗುತ್ತಿದೆ.
ಒಂದು ನೋಟಿಸ್ ಕಳುಹಿಸಲು ಚಲನ್, ಪ್ರಿಂಟಿಂಗ್ ಹಾಗೂ ಕಾಗದ ಸೇರಿದಂತೆ ಇಲಾಖೆಗೆ 4.5 ರೂ. ಖರ್ಚಾಗುತ್ತಿದ್ದು, ಕೆಲವೊಂದು ಪ್ರಕರಣಗಳಲ್ಲಿ ಖುದ್ದು ಪೇದೆಗಳೇ ವಾಹನಗಳ ಮಾಲೀಕರಿಗೆ ಚಲನ್ಗಳನ್ನು ತಲುಪಿಸುತ್ತಾರೆ. ಕೆಲವೊಮ್ಮೆ ವಾಹನಗಳ ಮಾಲೀಕರು ತಮ್ಮ ಮನೆ ಬದಲಿಸಿದ ಸಂದರ್ಭದಲ್ಲಿ ಚಲನ್ಗಳು ಅವರನ್ನು ತಲುಪದೇ ಇರುವ ಸಾಧ್ಯತೆಗಳು ಇರುತ್ತವೆ.
ಈ ಕಾರಣದಿಂದಾಗಿ ಸವಾರರಿಂದ ದಂಡ ವಸೂಲಿ ಮಾಡುವ ಸುಲಭ ಹಾಗೂ ಸ್ಮಾರ್ಟ್ ಯೋಜನೆಗೆ ಬೆಂಗಳೂರು ಸಂಚಾರಿ ಪೊಲೀಸರು ಮುಂದಾಗಿದ್ದಾರೆ.