ಅದಾಗಲೇ 38 ದೇಶಗಳಲ್ಲಿ ವ್ಯಾಪಿಸಿರುವ ಕೋವಿಡ್‌ನ ಒಮಿಕ್ರಾನ್ ಅವತಾರಿಯ ಕಾರಣದಿಂದ ಇದುವರೆಗೂ ಯಾವುದೇ ಸಾವು ಸಂಭವಿಸಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ತಿಳಿಸಿದೆ.
ಕೋವಿಡ್ ಲಸಿಕಾ ಕವಚ ಬೇಧಿಸಿ ಮಾನವರ ದೇಹದೊಳಗೆ ಪ್ರವೇಶಿಸುವ ಮಟ್ಟದಲ್ಲಿ ಮ್ಯುಟೇಷನ್‌ಗೆ ಒಳಗಾಗಿ, ವಿಶಿಷ್ಟವಾದ ಸ್ಪೈಕ್ ಪ್ರೋಟೀನ್ ಅಭಿವೃದ್ಧಿಪಡಿಸಿಕೊಂಡಿರುವ ಒಮಿಕ್ರಾನ್‌ನಿಂದಾಗಿ ಜಾಗತಿಕ ಆರ್ಥಿಕತೆಗೆ ದೊಡ್ಡ ಡ್ಯಾಮೇಜ್ ಆಗುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ಸ್ಥಳೀಯವಾಗಿ ವ್ಯಾಪಿಸಿದ ವೈರಸ್‌ನ ಅವತಾರದ ಬಗ್ಗೆ ಖಾತ್ರಿಪಡಿಸಿದ ದೇಶಗಳ ಸಾಲಿಗೆ ಇತ್ತೀಚೆಗೆ ತಾನೇ ಅಮೆರಿಕ ಮತ್ತು ಆಸ್ಟ್ರೇಲಿಯಾ ಸಹ ಸೇರಿಕೊಂಡಿವೆ.
ಕಿಯಾ ಕಾರ್ನಿವಾಲ್ ಎಂಪಿವಿ ಖರೀದಿಸಿದ ಸೋನು ನಿಗಂ…! ಈ ವಾಹನದ ವಿಶೇಷತೆಯೇನು ಗೊತ್ತಾ…?
ಮುಂದಿನ ಕೆಲ ತಿಂಗಳುಗಳಲ್ಲಿ ಯೂರೋಪ್‌ನಲ್ಲಿ ದಾಖಲಾಗಲಿರುವ ಅರ್ಧಕ್ಕಿಂತ ಹೆಚ್ಚಿನ ಕೋವಿಡ್ ಪ್ರಕರಣಗಳಿಗೆ ಒಮಿಕ್ರಾನ್ ಕಾರಣವಾಗಲಿದೆ ಎಂಬ ಎಚ್ಚರಿಕೆಗಳು ಸದ್ದು ಮಾಡಿವೆ. ಡೆಲ್ಟಾವತಾರಿ ಕೋವಿಡ್‌ನಂತೆಯೇ ಒಮಿಕ್ರಾನ್ ಸಹ ಜಾಗತಿಕ ಆರ್ಥಿಕತೆಯ ಚೇತರಿಕೆಯನ್ನು ನಿಧಾನಗೊಳಿಸಲಿದೆ.
ನವೆಂಬರ್ 24ರಂದು ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ವರದಿಯಾದ ಒಮಿಕ್ರಾನ್ ಅವತಾರೀ ಕೋವಿಡ್ ವೈರಾಣು, ಡೆಲ್ಟಾ ಹಾಗೂ ಬೀಟಾವತಾರಿಗಳ ಮೂರು ಪಟ್ಟು ಕ್ಷಮತೆಯನ್ನು ಹೊಂದಿದ್ದು, ಮತ್ತೆ ಮತ್ತೆ ಸೋಂಕು ಬರಲು ಕಾರಣವಾಗುವ ಭೀತಿಯನ್ನು ಅಲ್ಲಿನ ಸಂಶೋಧಕರು ವ್ಯಕ್ತಪಡಿಸಿದ್ದರು.
ಒಮಿಕ್ರಾನ್ ಪತ್ತೆಯಾದಾಗಿನಿಂದಲೂ ಆಸ್ಪತ್ರೆಯಲ್ಲಿ ದಾಖಲಾಗುವ ಐದು ವರ್ಷದೊಳಗಿನ ಮಕ್ಕಳ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂದು ದಕ್ಷಿಣ ಆಫ್ರಿಕಾ ವೈದ್ಯರು ತಿಳಿಸಿದ್ದಾರೆ. ಆದರೆ, ಈ ವೈರಾಣುವಿಗೆ ಮಕ್ಕಳು ತುತ್ತಾಗುವ ಸಾಧ್ಯತೆ ಹೆಚ್ಚಿದೆಯೇ ಎಂದು ಈಗಲೇ ಹೇಳಲು ಬರುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.