ನಿರಾಶ್ರಿತ ನಾಯಿಗಳನ್ನು ದತ್ತು ಪಡೆದು ಆಶ್ರಯ ನೀಡುವಂತೆ ಉತ್ತೇಜನ ನೀಡಲು ಮುಂದಾದ ರಷ್ಯಾದ ಫುಟ್ವಾಲ್ ಕ್ಲಬ್ ಒಂದರ ಆಟಗಾರರು, ಈ ಅಭಿಯಾನದ ಭಾಗವಾಗಿ, ಪಂದ್ಯವೊಂದರ ವೇಳೆ ತಮ್ಮ ಕೈಗಳಲ್ಲಿ ನಿರಾಶ್ರಿತ ನಾಯಿಗಳನ್ನು ಹೊತ್ತು ಮೈದಾನ ಪ್ರವೇಶಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಫುಟ್ಬಾಲ್ ಕ್ಲಬ್ ಜ಼ೆನಿಟ್ನ ಆಟಗಾರರು, ಜ಼ೆನಿಟ್ ಸೇಂಟ್ ಪೀಟರ್ಸ್ಬರ್ಗ್ ಎಂದೂ ಹೆಸರಿರುವವರು, ಗಾಜ಼್ಪ್ರಾಂ ಅರೆನಾಗೆ ಪ್ರವೇಶಿಸುವ ವೇಳೆ ತಮ್ಮೊಂದಿಗೆ ಹನ್ನೊಂದು ನಾಯಿಗಳನ್ನು ಕರೆತಂದಿದ್ದಾರೆ. ಈ ನಾಯಿಗಳಿಗೆ ಶಾಶ್ವತ ನೆಲೆಯನ್ನು ಕೋರಿ, ಪಂದ್ಯ ವೀಕ್ಷಿಸಲು ಬಂದಿದ್ದ ವೀಕ್ಷಕರ ಮುಂದೆ ಹೀಗೆ ಮಾಡಿದ್ದಾರೆ ಆಟಗಾರರು.
Big News: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಂದು ಕೊಂಚ ಏರಿಕೆ
ನವೆಂಬರ್ 30ರಂದು ಸಾಕುಪ್ರಾಣಿ ದಿನಾಚರಣೆ ಆಚರಿಸಿದ ರಷ್ಯಾದಲ್ಲಿ, ನಿರಾಶ್ರಿತ ನಾಯಿಗಳಿಗೆ ಸೂರು ಕಲ್ಪಿಸಲು ಕೋರಿ, ಈ ಕ್ಲಬ್ ರಷ್ಯನ್ ಕೈನಾಲಾಜಿಕಲ್ ಪ್ರತಿಷ್ಠಾನದೊಂದಿಗೆ ಕೈ ಜೋಡಿಸಿ ಅಭಿಯಾನವೊಂದಕ್ಕೆ ಚಾಲನೆ ನೀಡಿದೆ.
ವಿವಿಧ ತಳಿಯ ಶ್ವಾನಗಳನ್ನು ತಮ್ಮೊಂದಿಗೆ ಹೊತ್ತು ತಂದ ಆಟಗಾರರು ಅವುಗಳನ್ನು ಕ್ಯಾಮೆರಾಗೆ ತೋರುತ್ತಿದ್ದು, ಟಿವಿಯಲ್ಲಿ ಪಂದ್ಯ ವೀಕ್ಷಿಸುತ್ತಿರುವ ಮಂದಿಗೆ ಸೂರಿಲ್ಲದ ನಾಯಿಗಳಿಗೆ ಆಶ್ರಯ ಕಲ್ಪಿಸಲು ಕೋರಿಕೊಂಡಿದ್ದಾರೆ.
https://twitter.com/zenit_spb/status/1466800284248813583
https://twitter.com/fczenit_en/status/1466800489723572235