![](https://kannadadunia.com/wp-content/uploads/2021/12/Aditi-Prabhudev.jpg)
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ದಾವಣಗೆರೆ ಬೆಡಗಿ ಅದಿತಿ ಪ್ರಭುದೇವ ಮೊಟ್ಟಮೊದಲ ಬಾರಿಗೆ ವಿಭಿನ್ನ ಪಾತ್ರದಲ್ಲಿ ಅಭಿನಯಿಸಿರುವ ‘ಆನ’ ಚಿತ್ರ ಡಿಸೆಂಬರ್ 17ರಂದು ರಾಜ್ಯಾದ್ಯಂತ ತೆರೆಮೇಲೆ ಬರಲಿದೆ. ಹಾಗೂ ಡಿಸೆಂಬರ್ 6ರಂದು ಈ ಸಿನಿಮಾ ಟ್ರೈಲರ್ ರಿಲೀಸ್ ಮಾಡುವುದಾಗಿ ಕೂಡ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.
ಮಹಿಳೆ ಎದುರಲ್ಲೇ ಅಶ್ಲೀಲ ವರ್ತನೆ, ಕ್ಯಾಬ್ ಚಾಲಕನ ವಿರುದ್ಧ ಕ್ರಮ
ಈ ಚಿತ್ರವನ್ನು ಮನೋಜ್ ಪಿ ನಡಲುಮನೆ ನಿರ್ದೇಶಿಸಿದ್ದು, ಯುಕೆ ಪ್ರೊಡಕ್ಷನ್ಸ್ ಬ್ಯಾನರ್ ನಡಿ. ಪೂಜಾ ವಸಂತ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ರಿತ್ವಿಕ್ ಮುರಳೀಧರ್ ಸಂಗೀತ ಸಂಯೋಜನೆ ಇದೆ. ಈ ಸಿನಿಮಾ ಹೊರತುಪಡಿಸಿ ಅದಿತಿ ಪ್ರಭುದೇವ ಅವರ ಸುಮಾರು 10 ಚಿತ್ರಗಳು ಈಗಾಗಲೇ ತೆರೆಮೇಲೆ ಬರಲು ಸಜ್ಜಾಗಿವೆ.
![](https://kannadadunia.com/wp-content/uploads/2021/12/f1c1329a-079b-4ec0-ac57-1f12f964312a-1.jpg)