ನೀವು ಅಕ್ಕಿ, ಸಬ್ಬಕ್ಕಿಯಿಂದ ತಯಾರಿಸಿದ ಖೀರ್ ಅನ್ನು ತಿಂದಿರಬಹುದು. ಆದರೆ ನೀವು ಹೂಕೋಸಿನಿಂದ ತಯಾರಿಸಿದ ಖೀರ್ ಅನ್ನು ಸೇವಿಸಲು ಬಯಸಿದರೆ ಅದನ್ನು ತಯಾರಿಸುವ ವಿಧಾನ ತಿಳಿಯಿರಿ. ಈ ಖೀರ್ ತುಂಬಾ ರುಚಿಕರವಾಗಿದೆ.
ಇದನ್ನು ಹೆಚ್ಚಾಗಿ ಮಧ್ಯಪ್ರದೇಶದಲ್ಲಿ ತಯಾರಿಸಲಾಗುತ್ತದೆ. ಇದು ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಹಾಗಾಗಿ ಅದನ್ನು ಈ ರೀತಿ ತಯಾರಿಸಿ.
ಗ್ರಾಂಡ್ ರಿಲೀಸ್ ನಲ್ಲಿ ಮದಗಜ – ಶ್ರೀಮುರುಳಿ ಸಾಹಸಕ್ಕೆ ಅಭಿಮಾನಿಗಳು ಫಿದಾ
ಬೇಕಾಗುವ ಸಾಮಾಗ್ರಿಗಳು : 1 ಮಧ್ಯಮ ಗಾತ್ರದ ಹೂಕೋಸು, 1 ½ ಲೀಟರ್ ಹಾಲು, 250ಗ್ರಾಂ ಸಕ್ಕರೆ, 10 ಗೋಡಂಬಿ, 5 ಬಾದಾಮಿ, 10-15 ಒಣದ್ರಾಕ್ಷಿ, ಸ್ವಲ್ಪ ಏಲಕ್ಕಿ ಪುಡಿ, 3 ಚಮಚ ದೇಸಿ ತುಪ್ಪ.
ಮಾಡುವ ವಿಧಾನ : ಹೂಕೋಸನ್ನು ತೊಳೆದು ಸಣ್ಣದಾಗಿ ಕತ್ತರಿಸಿಟ್ಟುಕೊಳ್ಳಿ. ಈಗ ಬಾಣಲೆಯಲ್ಲಿ 2 ಚಮಚ ತುಪ್ಪ ಹಾಕಿ ಹೂಕೋಸನ್ನು ಹಾಕಿ ಕಂದು ಬಣ್ಣಕ್ಕೆ ಬರುವವರೆಗೂ ಹುರಿಯಿರಿ. ಬಳಿಕ ಅದಕ್ಕೆ ಹಾಲು ಸೇರಿಸಿ. ಹಾಲು ದಪ್ಪವಾದಾಗ ಏಲಕ್ಕಿ ಪುಡಿ ಮತ್ತು ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕೊನೆಯಲ್ಲಿ ಗೋಡಂಬಿ, ಬಾದಾಮಿ ಕತ್ತರಿಸಿ ಹಾಕಿದರೆ ಖೀರ್ ತಯಾರಾಗುತ್ತದೆ.