ನಿಮ್ಮ ಆಧಾರ್ ಕಾರ್ಡ್ಅನ್ನು ಸಾಕ್ಷಿಯಾಗಿ ಇಟ್ಟುಕೊಂಡು ಎಷ್ಟು ಸಿಮ್ ಕಾರ್ಡ್‌ಗಳನ್ನು ವಿತರಿಸಲಾಗಿದೆ ಎಂಬುದು ಬಹಳಷ್ಟು ಬಾರಿ ನಮಗೆ ಗೊತ್ತೇ ಆಗಿರುವುದಿಲ್ಲ.
ಟೆಲಿಸಂಪರ್ಕದ ಇಲಾಖೆಯ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ನೀವೀಗ ಈ ಮಾಹಿತಿಯನ್ನು ಕಂಡುಕೊಳ್ಳಬಹುದಾಗಿದೆ. ಇದೇ ವೇಳೆ, ಚಾಲ್ತಿಯಲ್ಲಿರದ ಸಿಮ್‌ಅನ್ನು ಆಫ್ ಮಾಡಲು ಸಹ ನೀವು ವಿನಂತಿಸಿಕೊಳ್ಳಬಹುದಾಗಿದೆ. ವಂಚನೆ ನಿರ್ವಹಣೆ ಮತ್ತು ಗ್ರಾಹಕ ರಕ್ಷಣೆಗಾಗಿ ಟೆಲಿಕಾಂ ಅನಾಲಿಟಿಕ್ಸ್ (ಟ್ಯಾಫ್‌ಕಾಪ್) ಈ ಸೇವೆಯ ಹೆಸರು.
ಬೆಚ್ಚಿಬೀಳಿಸುತ್ತೆ ಕಾಯಿಲೆ ಗುಣಪಡಿಸಲು ಈ ಚೈನೀಸ್ ಥೆರಪಿ ಅಳವಡಿಸುವ ವಿಧಾನ…!
ಸದ್ಯ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಮಾತ್ರವೇ ಈ ಸೇವೆ ಲಭ್ಯವಿದ್ದು, ಶೀಘ್ರದಲ್ಲೇ ದೇಶಾದ್ಯಂತ ದೊರಕುವಂತೆ ಮಾಡಲಾಗುವುದು.
https://tafcop.dgtelecom.gov.in ಲಿಂಕ್‌ಗೆ ಭೇಟಿ ನೀಡಿ, ನಿಮ್ಮ ಮೊಬೈಲ್ ಸಂಖ್ಯೆಗೆ 6-ಅಂಕಿಯ ಓಟಿಪಿ ಸ್ವೀಕರಿಸುವ ಮೂಲಕ, ನಿಮ್ಮ ಸಂಖ್ಯೆಯನ್ನು ಖಾತ್ರಿ ಪಡಿಸಿಕೊಂಡು, ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ಪಟ್ಟಿಯಲ್ಲಿರುವ ಮೊಬೈಲ್ ಸಂಖ್ಯೆಗಳನ್ನು ತಿಳಿಯಬಹುದಾಗಿದೆ. ಇವುಗಳ ಪೈಕಿ ಯಾವುದಾದರೂ ಸಿಮ್ ನಿಮ್ಮದಲ್ಲದೇ ಇದ್ದಲ್ಲಿ, ಆ ಸಂಖ್ಯೆಯ ಬಳಿ ಟಿಕ್ ಮಾಡುವ ಮೂಲಕ ಅದನ್ನು ನಿಷ್ಕ್ರಿಯಗೊಳಿಸಲು ವಿನಂತಿ ಮುಂದಿಡಬಹುದಾಗಿದೆ.