ಶಾಲೆಯ ಹೊರಗೆ ಕೇವಲ 30 ಸೆಕೆಂಡುಗಳ ಕಾಲ ಕಾರು ನಿಲ್ಲಿಸಿದ್ದಕ್ಕಾಗಿ 70 ಪೌಂಡ್ (ಸುಮಾರು ರೂ. 7,000) ದಂಡ ವಿಧಿಸಲಾಗಿದೆ ಎಂದು ಯುಕೆಯ ತಾಯಿ ಆರೋಪಿಸಿದ್ದಾರೆ.
ನಾಲ್ಕು ಮಕ್ಕಳ ತಾಯಿಯಾಗಿರುವ ಕೇಟೀ ಪೆಂಡರ್-ಎಕ್ಲೆಸ್ಟನ್ ಅವರು ಇತರ ಕಾರುಗಳು ಹಾದುಹೋಗುವುದಕ್ಕಾಗಿ ಪ್ರಾಥಮಿಕ ಶಾಲೆಯ ಎದುರಿನ ಜಿಗ್-ಜಾಗ್ ಲೇನ್ನಲ್ಲಿ ತನ್ನ ಕಾರನ್ನು ನಿಲ್ಲಿಸಿದ್ದಾಳೆ. ಆದರೆ, ಟ್ರಾಫಿಕ್ ಅಧಿಕಾರಿಗಳಿಂದ ಪೋಸ್ಟ್ನಲ್ಲಿ 70 ಪೌಂಡ್ ದಂಡವನ್ನು ಸ್ವೀಕರಿಸಿದಾಗ ಆಕೆ ನಿಜಕ್ಕೂ ಆಘಾತಕ್ಕೊಳಗಾಗಿದ್ದಾಳೆ.
ಸಿಸಿ ಕ್ಯಾಮರಾದ ವಿಡಿಯೋ ಕ್ಲಿಪ್ ಅನ್ನು ಹಂಚಿಕೊಳ್ಳಲಾಗಿದ್ದು, ಸಿಲ್ವರ್ ಫೋರ್ಡ್ ಮ್ಯಾನರ್ ಸಮುದಾಯ ಪ್ರಾಥಮಿಕ ಶಾಲೆಯ ಎದುರಿನ ಜಿಗ್-ಜಾಗ್ ಲೇನ್ಗಳ ಮುಂಭಾಗದಲ್ಲಿ ಕಾರು ನಿಂತಿದೆ. ಕಿರಿದಾದ ರಸ್ತೆಯಲ್ಲಿ ಬೇರೆ ಕಾರುಗಳು ಹಾದು ಹೋಗುವುದಕ್ಕಾಗಿ 30 ಸೆಕೆಂಡುಗಳಿಗಿಂತ ಕಡಿಮೆ ಸಮಯ ಕಾರನ್ನು ನಿಲ್ಲಿಸಲಾಗಿದೆ. ಬಳಿಕ ಕಾರು ಹೊರಟಿರುವುದನ್ನು ವಿಡಿಯೋ ತೋರಿಸುತ್ತದೆ.
ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ, ಕೇಟಿಯ ಪತಿ ದಂಡ ಕಡಿತಕ್ಕೆ ಮನವಿ ಮಾಡಿದ್ದಾರೆ. ಅಲ್ಲದೆ ದಂಡವನ್ನು ತಪ್ಪಾಗಿ ವಿಧಿಸಲಾಗಿದೆ ಎಂದು ಪತಿ ಹೇಳಿದ್ದಾರೆ.
ಯುಕೆ ಯಲ್ಲಿ ನಡೆದ ಮತ್ತೊಂದು ಇತ್ತೀಚಿನ ಪಾರ್ಕಿಂಗ್ ಘಟನೆಯಲ್ಲಿ, ಹೊಸ ಪಾರ್ಕಿಂಗ್ ನಿಯಮದ ಮೇಲೆ ಮೆಕ್ಡೊನಾಲ್ಡ್ಸ್ ಡ್ರೈವ್-ಥ್ರೂ ಗ್ರಾಹಕನಿಗೆ 400 ಪೌಂಡ್ (ಸುಮಾರು ರೂ. 39,000) ದಂಡ ವಿಧಿಸಲಾಗಿತ್ತು.