alex Certify ಆಗಸದಲ್ಲಿ ಹತ್ತಿ ಉಂಡೆಯಂತಹ ಅಪರೂಪದ ಮೋಡಗಳ ಸೃಷ್ಟಿ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಗಸದಲ್ಲಿ ಹತ್ತಿ ಉಂಡೆಯಂತಹ ಅಪರೂಪದ ಮೋಡಗಳ ಸೃಷ್ಟಿ: ವಿಡಿಯೋ ವೈರಲ್

ಆಕಾಶದಲ್ಲಿ ಕಂಡುಬಂದ ವಿಚಿತ್ರ ಮೋಡದ ರಚನೆಯು ಅರ್ಜೆಂಟೀನಾ ನಿವಾಸಿಗಳನ್ನು ದಿಗ್ಭ್ರಮೆಗೊಳಿಸಿದೆ. ಹತ್ತಿ ಉಂಡೆಗಳಂತೆ ಕಾಣುವ ಮೋಡಗಳಿಂದ ಆವೃತವಾದ ಆಕಾಶದ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಈಗಿದೆ.

ಅಪರೂಪದ ಮೋಡದ ರಚನೆಗಳನ್ನು ಮಮ್ಮಟಸ್ ಮೋಡಗಳು ಎಂದು ಕರೆಯಲಾಗುತ್ತದೆ. ನವೆಂಬರ್ 13 ರಂದು ಕಾರ್ಡೋಬಾದ ಕಾಸಾ ಗ್ರಾಂಡೆ ಮೇಲೆ ಆಕಾಶದಲ್ಲಿ ಈ ವಿಶಿಷ್ಠ ಮೋಡಗಳು ಕಾಣಿಸಿಕೊಂಡಿವೆ.

ಶಾಲಾ ಮಕ್ಕಳಿಗೆ ಮತ್ತೊಂದು ಸಿಹಿ ಸುದ್ದಿ: ಬಿಸಿಯೂಟದ ಜೊತೆಗೆ ಮೊಟ್ಟೆ, ಬಾಳೆಹಣ್ಣು ವಿತರಣೆ

ಮಮ್ಮಟಸ್ ಮೋಡಗಳು ಮತ್ತೊಂದು ಮೋಡದ ತಳದಿಂದ ಹೊರಹೊಮ್ಮುವ ಉಬ್ಬುಗಳು ಅಥವಾ ಚೀಲಗಳ ಸರಣಿಯೊಂದಿಗೆ ಕೆಲವು ಅಸಾಮಾನ್ಯ ಮತ್ತು ವಿಶಿಷ್ಟವಾದ ಮೋಡಗಳ ರಚನೆಗಳಾಗಿವೆ. ಈ ಮೋಡಗಳು ಸಾಮಾನ್ಯವಾಗಿ ಗುಡುಗು-ಸಿಡಿಲುಗಳನ್ನು ಉಂಟು ಮಾಡುತ್ತೆ. ಇದು ಭಾರೀ ಮಳೆ, ಮಿಂಚು ಮತ್ತು ಆಲಿಕಲ್ಲು ಮಳೆಯ ಆಗಮನವನ್ನು ಸೂಚಿಸುತ್ತದೆ.

ಮಮ್ಮಟಸ್ ಮೋಡಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೆಲವು ನೆಟ್ಟಿಗರು ಈ ಮೋಡದ ರಚನೆಗಳು ಮೋಡಿಮಾಡಿವೆ ಎಂದು ಹೇಳಿದ್ರೆ, ಇತರರು ಇದು ಬೇರೆ ಗ್ರಹದಿಂದ ಬಂದಿರುವ ಸಾಧ್ಯತೆಯಿದೆ ಎಂದು ಭಾವಿಸಿದ್ದಾರೆ.

ಜಾತಕದಲ್ಲಿ ಈ ದೋಷ ಕಂಡು ಬಂದ್ರೆ ಪರಿಹಾರ ಕಷ್ಟ

ಕಳೆದ ವರ್ಷ, ಉಕ್ರೇನ್‌ನ ರಾಜಧಾನಿ ಕೀವ್‌ನಲ್ಲಿ ದೈತ್ಯ ಅಣಬೆಯ ಆಕಾರದಲ್ಲಿದ್ದ ಮೋಡವು ಆಕಾಶವನ್ನು ತುಂಬಿತ್ತು. ಭಯಭೀತರಾದ ಸ್ಥಳೀಯರು ಮೋಡದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ, ಮೋಡವು ಪರಮಾಣು ಸ್ಫೋಟದ ಭೀತಿಯನ್ನು ಹುಟ್ಟುಹಾಕಿತ್ತು.

1968 ರಲ್ಲಿ ವಿಶ್ವದ ಅತ್ಯಂತ ಭೀಕರ ಪರಮಾಣು ದುರಂತದ ಸ್ಥಳವಾದ ಚೆರ್ನೋಬಿಲ್‌ನಿಂದ ಕೇವಲ 60 ಮೈಲುಗಳಷ್ಟು ದೂರದಲ್ಲಿ ಈ ಅಪರೂಪದ ಮೋಡ ಕಾಣಿಸಿಕೊಂಡಿತ್ತು. ಆದರೆ, ಈ ಮೋಡವು ಅಂವಿಲ್ ಮೋಡ ಎಂದು ಕರೆಯಲ್ಪಡುವ ಅಪರೂಪದ ರಚನೆಯಾಗಿದೆ ಎಂದು ಅಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...