ಅಪೌಷ್ಠಿಕತೆಯಿಂದ ಬಳಲುತ್ತಿರುವ ಸಿಂಹದ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಮೃಗಾಲಯದ ಅಧಿಕಾರಿಗಳು……! 25-11-2021 8:33AM IST / No Comments / Posted In: Latest News, Live News, International ಪಾಕಿಸ್ತಾನದ ಕರಾಚಿ ಮೃಗಾಲಯದ ಆವರಣದೊಳಗೆ ಅತ್ಯಂತ ಅಪೌಷ್ಟಿಕ ಮತ್ತು ನಿದ್ರಾಹೀನ ಸಿಂಹ ಮಲಗಿರುವ ವಿಡಿಯೋವೊಂದು ವೈರಲ್ ಆಗಿದೆ. ಇದು ಸಂಸ್ಥೆಯ ಆಹಾರ ಪೂರೈಕೆಯ ಬಗ್ಗೆ ಹಲವು ಊಹಾಪೋಹ ಏಳಲು ಕಾರಣವಾಗಿದೆ. ವರದಿಯ ಪ್ರಕಾರ, ಸರಬರಾಜುದಾರರೊಬ್ಬರು ತಿಂಗಳಿನಿಂದ ಸಂಬಳ ನೀಡಿಲ್ಲ ಎಂದು ಆರೋಪಿಸಿದ ನಂತರ, ಮೃಗಾಲಯಕ್ಕೆ ಆಹಾರ ಪೂರೈಕೆಯನ್ನು ಈ ವಾರದ ಆರಂಭದಲ್ಲಿ ಸ್ಥಗಿತಗೊಳಿಸಲಾಗಿದೆ. ಫೆಬ್ರವರಿ 2021 ರಿಂದ ಆಡಳಿತ ಮಂಡಳಿಯು ಬಾಕಿ ಪಾವತಿ ಮಾಡಿಲ್ಲ ಎಂದು ಗುತ್ತಿಗೆದಾರ ಅಮ್ಜದ್ ಮೆಹಬೂಬ್ ಹೇಳಿದ್ದಾರೆ. ಕರಾಚಿ ಪುರಸಭೆಯ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸಿದ್ದು, ಮೃಗಾಲಯಕ್ಕೆ ಮತ್ತೆ ಆಹಾರ ಪೂರೈಕೆ ಮಾಡಲಾಗುತ್ತಿದೆ ಎಂದು ಮಹಮೂದ್ ಹೇಳಿದ್ದಾರೆ. ಅಲ್ಲದೆ, ಗುತ್ತಿಗೆದಾರರಿಗೆ ಡಿಸೆಂಬರ್ ವೇಳೆಗೆ ಬಾಕಿ ಪಾವತಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಶಾಲಾ ಮಕ್ಕಳಿಗೆ ಮತ್ತೊಂದು ಸಿಹಿ ಸುದ್ದಿ: ಬಿಸಿಯೂಟದ ಜೊತೆಗೆ ಮೊಟ್ಟೆ, ಬಾಳೆಹಣ್ಣು ವಿತರಣೆ ಅಂದ ಹಾಗೆ, ಕರಾಚಿ ಮೆಟ್ರೋಪಾಲಿಟನ್ ಕಾರ್ಪೊರೇಷನ್ ಕರಾಚಿ ಮೃಗಾಲಯದಲ್ಲಿರುವ ಎಲ್ಲಾ ಪ್ರಾಣಿಗಳಿಗೆ ಸರಿಯಾಗಿ ಆಹಾರವನ್ನು ನೀಡುತ್ತಿದೆ ಎಂದು ಹೇಳಿದೆ. ಪತ್ರಕರ್ತೆ ಕ್ವಾಟ್ರಿನಾ ಹೊಸೈನ್ ಅವರು ನಗರದ ಆಡಳಿತಾಧಿಕಾರಿ ಮುರ್ತಾಜಾ ವಹಾಬ್ ಸಿದ್ದಿಕಿಯನ್ನು ಟ್ಯಾಗ್ ಮಾಡಿ ಭೀಕರ ದೃಶ್ಯಗಳ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು. ಹಸಿವಿನಿಂದ ಸೊರಗಿದ್ದ ಸಿಂಹದ ಪರಿಸ್ಥಿತಿ ಕಂಡು ಹಲವರು ಮರುಗಿದ್ದರು. ಜಾತಕದಲ್ಲಿ ಈ ದೋಷ ಕಂಡು ಬಂದ್ರೆ ಪರಿಹಾರ ಕಷ್ಟ ಟ್ವಿಟ್ಟರ್ ನಲ್ಲಿ ಭೀಕರ ದೃಶ್ಯದ ವಿಡಿಯೋ ಅಪ್ಲೋಡ್ ಮಾಡುತ್ತಿದ್ದಂತೆ ಕೇವಲ ಎರಡು ದಿನಗಳೊಳಗೆ 56,000 ವೀಕ್ಷಣೆಗಳನ್ನು ಗಳಿಸಿದೆ. ಆಹಾರ ಪೂರೈಕೆ ಮಾಡದಿದ್ದರೆ ಮೃಗಾಲಯವನ್ನು ಮುಚ್ಚಿ ಬಿಡಿ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರಾಚಿ ಮೃಗಾಲಯವು ಪಾಕಿಸ್ತಾನದ ಅತಿದೊಡ್ಡ ಮೃಗಾಲಯವಾಗಿದೆ. ಈ ವರ್ಷದ ಆರಂಭದಲ್ಲಿ, ಪಾಕಿಸ್ತಾನದ ಪ್ರಭಾವಿಯೊಬ್ಬರು ಪಾರ್ಟಿಯೊಂದರಲ್ಲಿ ಹೆಣ್ಣು ಸಿಂಹವನ್ನು ಮನರಂಜನೆಗಾಗಿ ಬಳಸಿದ್ದಕ್ಕಾಗಿ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. We have no right to zoos if this is how we treat animals….Karachi Zoo fails to pay food suppliers….The animals are already in awful shape.My heart is breaking. Let's shut down all zoos @murtazawahab1 pic.twitter.com/lBZNFnDqO5 — Quatrina (@QuatrinaHosain) November 22, 2021