ಬೆಂಗಳೂರು: ರಾಜ್ಯದಲ್ಲಿ ಅಕಾಲಿಕವಾಗಿ ಸುರಿದ ಭಾರಿ ಮಳೆಯಿಂದ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ತರಕಾರಿ ಬೆಳೆ ಕೂಡ ಹಾಳಾಗಿದ್ದು, ಇದರಿಂದ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ತರಕಾರಿ ಬರುತ್ತಿರುವುದರಿಂದ ಬೆಲೆ ಗಗನಮುಖಿಯಾಗಿದೆ.
ಅದರಲ್ಲಿಯೂ ಟೊಮೆಟೊ, ನುಗ್ಗೆಕಾಯಿ ಸೇರಿದಂತೆ ಬಹುತೇಕ ತರಕಾತಿ ದರ ಭಾರೀ ಏರಿಕೆ ಕಂಡಿದೆ. ಸೊಪ್ಪಿನ ದರ ಕೂಡ ಜಾಸ್ತಿಯಾಗಿದೆ. ಸಣ್ಣ ತರಕಾರಿ ಮಾರಾಟಗಾರರು ಬೆಲೆ ಏರಿಕೆ ಮತ್ತು ನಷ್ಟದ ಕಾರಣಕ್ಕೆ ತರಕಾರಿ ಮಾರಾಟಕ್ಕೆ ಬ್ರೇಕ್ ಹಾಕಿದ್ದಾರೆ.
ಇನ್ನು ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ 15 ಕೆಜಿ ಟೊಮೆಟೊ ಬಾಕ್ಸ್ 3,100 ರೂಪಾಯಿ ಹರಾಜಾಗಿದೆ. ಈ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ. 15 ಕೆಜಿ ಬಾಕ್ಸ್ ಗೆ ಕೆಜಿಗೆ 200 ರೂ. ದರದಲ್ಲಿ ಹರಾಜಾಗಿದೆ. ಕಳೆದ ವಾರ 15 ಕೆಜಿ ಟೊಮೆಟೊಗೆ 2000 ರೂ.ಗೆ ಮಾರಾಟವಾಗಿತ್ತು.