ಒಂದು ದಶಕ ಕಾಲ ಪ್ರೇಮಿಗಳಾಗಿ ಸುತ್ತಾಡಿದ ಬಳಿಕ ಬಾಲಿವುಡ್ ನಟ ರಾಜ್ಕುಮಾರ್ ರಾವ್ ಚಂಡೀಗಢದಲ್ಲಿ ನಟಿ, ಪ್ರಿಯತಮೆ ಪತ್ರಲೇಖಾ ಅವರೊಂದಿಗೆ ವಿವಾಹವಾಗಿದ್ದಾರೆ. ಇವರ ವಿವಾಹ ಮಹೋತ್ಸವದ ಫೋಟೋ, ವಿಡಿಯೋಗಳು ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿವೆ.
ರಾಜ್-ಪತ್ರಲೇಖಾ ಅವರ ವಿವಾಹದ ವಿಡಿಯೋ ನೋಡಿದ ಅಭಿಮಾನಿಗಳಂತೂ ಮನಸೋತಿದ್ದಾರೆ. ಹಿಂದೂ ಸಂಪ್ರದಾಯದ ಪ್ರಕಾರ ಈ ಜೋಡಿ ವಿವಾಹವಾಗಿದ್ದಾರೆ. ರಾಜ್ಕುಮಾರ್ ರಾವ್ ಅವರು ಪತ್ರಲೇಖಾ ಅವರ ಹಣೆಯ ಮೇಲೆ ಸಿಂಧೂರ ಹಾಕಿದ್ದಾರೆ. ನಂತರ ತಮಗೂ ಸಿಂಧೂರ ಹಾಕುವಂತೆ ಪತ್ರಲೇಖಾರನ್ನು ಕೇಳಿದ್ದಾರೆ.
ಪತ್ರಲೇಖಾ ಕೂಡ ರಾಜ್ ಕುಮಾರ್ ಹಣೆಯ ಮೇಲೆ ಕುಂಕುಮವಿಟ್ಟಿದ್ದಾರೆ. ಈ ಕ್ಷಣವು ಅಭಿಮಾನಿಗಳ ಗಮನ ಸೆಳೆದಿದ್ದು, ನಿಜವಾದ ಪ್ರೀತಿ ಅಂದ್ರೆ ಇದುವೆ ಎಂದು ವ್ಯಾಪಕವಾಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ರಾಜ್ಕುಮಾರ್ ರಾವ್ ಅವರ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ಹಂಚಿಕೊಂಡ ವಿವಾಹದ ವಿಡಿಯೋದಲ್ಲಿ, ಪತ್ರಲೇಖಾ ತನ್ನ ಪತಿಗಾಗಿ ಭಾಷಣ ಮಾಡಿರುವುದನ್ನು ನೋಡಬಹುದು.