ಸಹಕಾರಿ ಸಂಘಗಳು ತಮ್ಮ ಹೆಸರಿನಲ್ಲಿ ಬ್ಯಾಂಕ್ ಎಂದು ಬಳಸುವ ಮೂಲಕ ತಮ್ಮ ಸದಸ್ಯರಲ್ಲದ ಗ್ರಾಹಕರಿಂದ ಠೇವಣಿಗಳನ್ನು ಸ್ವೀಕರಿಸುತ್ತಿರುವುದರ ಬಗ್ಗೆ ಆರ್.ಬಿ.ಐ. ಸಾರ್ವಜನಿಕರನ್ನು ಎಚ್ಚರಿಸಿದೆ.
ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949ರ ತಿದ್ದುಪಡಿಯ ನಂತರ 2020ರ ಸೆಪ್ಟೆಂಬರ್ 29ರಿಂದ ಅನ್ವಯವಾಗುವಂತೆ ಆರ್.ಬಿ.ಐ.ನಿಂದ ಅನುಮತಿ ಪಡೆದವರನ್ನು ಹೊರತುಪಡಿಸಿ ಯಾವುದೇ ಸಹಕಾರಿ ಸಂಘಗಳು ತಮ್ಮ ಹೆಸರಿನ ಭಾಗವಾಗಿ ಬ್ಯಾಂಕ್, ಬ್ಯಾಂಕರ್ ಅಥವಾ ಬ್ಯಾಂಕಿಂಗ್ ಎಂದು ಹೆಸರಿನಲ್ಲಿ ಬಳಕೆ ಮಾಡುವಂತಿಲ್ಲ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.
ಕೆಲ ಸಹಕಾರಿ ಸಂಘಗಳು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸಿ ತಮ್ಮ ಹೆಸರಿನಲ್ಲಿ ಬ್ಯಾಂಕ್ ಪದವನ್ನು ಬಳಕೆ ಮಾಡುತ್ತಿರೋದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಆರ್.ಬಿ.ಐ. ಈ ಹೇಳಿಕೆಯನ್ನು ಹೊರಡಿಸಿದೆ.
ಕೆಲವು ಸಹಕಾರಿ ಸಂಘಗಳು ಸದಸ್ಯರಲ್ಲದ ಅಥವಾ ನಾಮ ಮಾತ್ರ ಸದಸ್ಯರಿಂದ ಅಥವಾ ಸಹ ಸದಸ್ಯರಿಂದ ಬ್ಯಾಂಕ್ ಹೆಸರಿನಲ್ಲಿ ಠೇವಣಿಗಳನ್ನು ಸ್ವೀಕರಿಸುತ್ತಿರುವುದು ಗಮನಕ್ಕೆ ಬಂದಿದೆ. ಇದು ಕೂಡ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಆರ್.ಬಿ.ಐ. ಹೇಳಿದೆ.
ಇದು ಮಾತ್ರವಲ್ಲದೇ ಠೇವಣಿ ವಿಮೆ ಹಾಗೂ ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಷನ್ನ ವಿಮಾ ರಕ್ಷಣೆಯು ಈ ಸೊಸೈಟಿಗಳಲ್ಲಿ ಇರಿಸಲಾದ ಠೇವಣಿಗಳಿಗೆ ಲಭ್ಯವಿರೋದಿಲ್ಲ ಎಂದು ಹೇಳಿದೆ.