ಹುಟ್ಟುತ್ತಲೇ ಎಲ್ಲಾ ಮಕ್ಕಳು ಅಳುತ್ತವೆ ಎಂಬುದು ಜಗತ್ತಿಗೇ ಗೊತ್ತಿರುವ ಸತ್ಯ. ಆದರೆ ಹಾಸ್ಯವನ್ನು ಅರಿತು ಅದಕ್ಕೆ ಪ್ರತಿಕ್ರಿಯಿಸುವ ಗುಣವನ್ನು ಮಕ್ಕಳು ಹುಟ್ಟಿದ ತಿಂಗಳಲ್ಲೇ ಪಡೆಯುತ್ತವೆ ಎಂದು ಬ್ರಿಸ್ಟನ್ ವಿವಿಯ ಅಧ್ಯಯನವೊಂದು ಹೇಳುತ್ತಿದೆ.
ವಿವಿಯ ಸಂಶೋಧಕರ ಪ್ರಕಾರ, ಮಕ್ಕಳಿಗೆ ಒಂದು ತಿಂಗಳು ತುಂಬುವಷ್ಟರಲ್ಲೇ ಹಾಸ್ಯ ಪ್ರಜ್ಞೆ ಬೆಳೆದಿರುತ್ತದೆ. ಈ ಅಧ್ಯಯನವನ್ನು 671 ಶಿಶುಗಳ ಮೇಲೆ ಮಾಡಲಾಗಿದ್ದು, ಇವುಗಳು 0-48 ತಿಂಗಳ ವಯೋಮಾನದ ನಡುವಿನ ಮಕ್ಕಳಾಗಿವೆ. ಮಕ್ಕಳಲ್ಲಿ ವಿನೋದ ಪ್ರಜ್ಞೆ ಹೇಗೆ ಬೆಳೆಯುತ್ತದೆ ಎಂದು ಅರಿಯಲು ಈ ಅಧ್ಯಯನ ಹಮ್ಮಿಕೊಳ್ಳಲಾಗಿತ್ತು.
ಫನ್ನಿ ಮುಖಗಳು, ದನಿಗಳು, ತಮಾಷೆ ಮಾಡುವುದು, ಬಚ್ಚಿಟ್ಟು ತೋರುವುದು, ದೈಹಿಕ ತಮಾಷೆ, ಶಬ್ದಗಳ ಬಳಕೆ ಸೇರಿದಂತೆ 21 ಭಿನ್ನ ಟ್ರಿಕ್‌ಗಳ ಮೂಲಕ ಮಕ್ಕಳ ಪ್ರತಿಕ್ರಿಯೆಗಳನ್ನು ಅಂದಾಜಿಸಲಾಗಿದೆ.
ʼಮನಿಕೆ ಮಗೆ ಹಿತೆʼಗೆ ಧ್ವನಿಗೂಡಿಸಿದ ಮಾಜಿ ಸಿಎಂ ಪತ್ನಿ
ವಿಶ್ಲೇಷಣೆಯ ಪ್ರಕಾರ ಮಕ್ಕಳು ತಮ್ಮ ಒಂದೇ ತಿಂಗಳಿನಲ್ಲೇ ಹಾಸ್ಯವನ್ನು ಅರಿಯಲು ಆರಂಭಿಸಿ, ಎರಡನೇ ತಿಂಗಳು ತುಂಬುವ ವೇಳೆಗೆ ಅಧ್ಯಯನಕ್ಕೊಳಪಟ್ಟ ಮಕ್ಕಳ ಪೈಕಿ 50% ಮಕ್ಕಳು ಹಾಸ್ಯಕ್ಕೆ ಪ್ರತಿಕ್ರಿಯಿಸಿವೆ. ಒಮ್ಮೆ ಮಕ್ಕಳಿಗೆ ಹಾಸ್ಯ ಪ್ರಜ್ಞೆ ಬೆಳೆದುಬಿಟ್ಟರೆ ಅವು ಪದೇ ಪದೇ ಅಂಥದ್ದೇ ಚೇಷ್ಟೆಯನ್ನು ಮಾಡುತ್ತಲೇ ಇರುತ್ತವೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.