ಸಂಗಾತಿಗಳಿಗೆ ಪಿಂಚಣಿ ಪಡೆಯಲು ಇನ್ನು ಮುಂದೆ ಜಂಟಿ ಖಾತೆ ಹೊಂದಬೇಕಾದ ಅಗತ್ಯವಿಲ್ಲವೆಂದು ಸರ್ಕಾರ ತಿಳಿಸಿದೆ.
ಕೇಂದ್ರ ಸರ್ಕಾರದ ಸಿಬ್ಬಂದಿ, ಸಾರ್ವಜನಿಕ ಸಮಸ್ಯೆಗಳು ಹಾಗೂ ಪಿಂಚಣಿಯ ರಾಜ್ಯ ಖಾತೆ ಸಚಿವ ಜಿತೇಂದ್ರ ಸಿಂಗ್ ಈ ಬಗ್ಗೆ ಮಾತನಾಡಿ, ಪಿಂಚಣಿದಾರರು ಹಾಗೂ ನಿವೃತ್ತ ನೌಕರರು ಸೇರಿದಂತೆ ಎಲ್ಲಾ ವರ್ಗದಲ್ಲೂ ಜನಜೀವನವನ್ನು ಇನ್ನಷ್ಟು ಸರಳಗೊಳಿಸುವ ನರೇಂದ್ರ ಮೋದಿ ಸರ್ಕಾರದ ಕ್ರಮ ಇದಾಗಿದೆ ಎಂದಿದ್ದಾರೆ.
ನಿವೃತ್ತರಾಗಲಿರುವ ನೌಕರರು ತಮ್ಮ ಸಂಗಾತಿಯ ಹೆಸರಿನಲ್ಲಿ ಜಂಟಿ ಖಾತೆ ತೆರೆಯಲು ಸಾಧ್ಯವಾಗಿಲ್ಲ ಎಂಬುದು ಸಂಬಂಧಪಟ್ಟ ಕಚೇರಿಯ ಮುಖ್ಯಸ್ಥರಿಗೆ ಅನಿಸಿದಲ್ಲಿ, ಈ ಷರತ್ತನ್ನು ಸಡಿಲಿಸಬಹುದು ಎಂದಿ ಅಧಿಕೃತ ಪ್ರಕಟಣೆ ತಿಳಿಸಿದೆ.
ʼಮನಿಕೆ ಮಗೆ ಹಿತೆʼಗೆ ಧ್ವನಿಗೂಡಿಸಿದ ಮಾಜಿ ಸಿಎಂ ಪತ್ನಿ
ಕೇಂದ್ರ ಸರ್ಕಾರದ ಪಿಂಚಣಿ ವಿತರಿಸುವ ಎಲ್ಲಾ ಬ್ಯಾಂಕುಗಳಿಗೆ ಈ ಸಂಬಂಧ ಸುತ್ತೋಲೆ ಹೊರಡಿಸಿದ್ದು, ಕುಟುಂಬ ಪಿಂಚಣಿದಾರರಾದ ಸಂಗಾತಿಯು ಚಾಲ್ತಿಯಲ್ಲಿರುವ ಜಂಟಿ ಬ್ಯಾಂಕ್ ಖಾತೆಯ ಮೂಲಕ ಪಿಂಚಣಿ ಪಡೆಯಲು ಇಚ್ಛಿಸಿದಲ್ಲಿ ಬ್ಯಾಂಕುಗಳು ಅವರಿಗೆ ಹೊಸ ಖಾತೆ ತೆರೆಯಲು ಒತ್ತಾಯ ಮಾಡಬಾರದು ಎನ್ನಲಾಗಿದೆ.
ಪಿಂಚಣಿ ಪಾವತಿ ಆದೇಶ (ಪಿಪಿಓ) ಅನ್ವಯ, ಕುಟುಂಬ ಪಿಂಚಣಿ ಪಡೆಯಲು ಸಂಬಂಧಪಟ್ಟ ನೌಕರರು ತಾವು ಯಾರ ಹೆಸರಿನಲ್ಲಿ ಪಿಂಚಣಿ ಬರುವಂತೆ ಮಾಡಲು ಇಚ್ಛಿಸುವರೋ ಅವರ ಹೆಸರಿನೊಂದಿಗೆ ಜಂಟಿ ಖಾತೆ ತೆರೆಯುವುದು.
ಸಾಮಾನ್ಯ ವಿಮಾ ಕ್ಷೇತ್ರದ ಪಿಎಸ್‌ಯು ನೌಕರರಿಗೆ ಗುಡ್ ನ್ಯೂಸ್
ಇಂಥ ಖಾತೆಗಳಲ್ಲಿ ’ಮೊದಲಿಗರು ಅಥವಾ ಉಳಿದಿರುವವರು’ ಅಥವಾ ’ಇಬ್ಬರೂ ಅಥವಾ ಉಳಿದಿರುವವರು’ ಎಂಬ ಆಧಾರದಲ್ಲಿ ಚಟುವಟಿಕೆ ನಡೆಸಿಕೊಂಡು ಹೋಗಬಹುದು ಎಂದು ಸಿಂಗ್ ತಿಳಿಸಿದ್ದಾರೆ.
ಕೌಟುಂಬಿಕ ಪಿಂಚಣಿಯನ್ನು ನೀಡಲು ತಡವಾಗದಂತೆ ನೋಡಿಕೊಂಡು, ಪಿಂಚಣಿಗೆಂದು ಹೊಸದಾಗಿ ಖಾತೆ ತೆರೆಯಲು ಪಿಂಚಣಿದಾರರಿಗೆ ಕಠಿಣವಾಗಬಾರದು ಎಂಬುದು ಜಂಟಿ ಖಾತೆ ತೆರೆಯುವ ಹಿಂದಿನ ಉದ್ದೇಶವಾಗಿದೆ.