ಆಸ್ಪತ್ರೆಗೆ ಬಂದ ಗಾಯಗೊಂಡ ಜಿಂಕೆಯೊಂದು ಎಸ್ಕಲೇಟರ್ ಏರಿ ಹೋಗುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಗಾಯಗೊಂಡಾಗ ಈ ಆಸ್ಪತ್ರೆಯ ಯಾವ ವಿಭಾಗಕ್ಕೆ ಹೋಗಬೇಕೆಂದು ಜಿಂಕೆಗೆ ಗೊತ್ತೇನೋ ಎಂಬಂತೆ ಅನಿಸುತ್ತಿದೆ ಈ ವಿಡಿಯೋ ನೋಡಿದಾಗ.
ಲೌಸಿಯಾನಾದ ಆಸ್ಪತ್ರೆಯೊಂದರಲ್ಲಿ ಸೋಮವಾರದಂದು ಈ ವಿಡಿಯೋ ಘಟಿಸಿದೆ. ಇಲ್ಲಿನ ’ಅವರ್ ಲೇಡಿ ಆಫ್ ದಿ ಲೇಕ್’ ಆಸ್ಪತ್ರೆಗೆ ಆಗಮಿಸಿದ ಜಿಂಕೆ, ನುಣುಪಾದ ನೆಲದ ಮೇಲೆ ಕಕ್ಕಾಬಿಕ್ಕಿಯಾಗಿ ಹೆಜ್ಜೆ ಹಾಕುತ್ತಾ, ಎಸ್ಕಲೇಟರ್ ಏರಿ ಎರಡನೇ ಫ್ಲೋರ್ಗೆ ಬಂದಿದೆ. ಈ ದೃಶ್ಯ ಕಂಡ ನೋಡುಗರು ಅಚ್ಚರಿಗೊಂಡಿದ್ದರು.
ಶಾಲೆ ತೊರೆದ 60 ವರ್ಷಗಳ ನಂತರ ವಿಶ್ವವಿದ್ಯಾಲಯದ ಮೆಟ್ಟಿಲು ಹತ್ತಿದ 77ರ ವೃದ್ಧೆ..!
ಕೂಡಲೇ ಸ್ಥಳಕ್ಕೆ ಧಾವಿಸಿದ ವನ್ಯಜೀವಿ ಸಂರಕ್ಷಕರು ಜಿಂಕೆಯನ್ನು ಚೀಲವೊಂದರಲ್ಲಿ ಹಾಕಿಕೊಂಡು ಹೊರ ತೆಗೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಗೆ ಹಾಸಿಗೆಯೊಂದರ ಮೇಲಿದ್ದ ಜಿಂಕೆಯನ್ನು ಆಚೆ ನಿಂತಿದ್ದ ಲಾರಿಯೊಳಗೆ ಕೊಂಡೊಯ್ದಿದ್ದಾರೆ ಸಿಬ್ಬಂದಿ.
ಆಸ್ಪತ್ರೆಗೆ ಬರುವ ಮುನ್ನ ಬಹುಶಃ ಯಾವುದೋ ವಾಹನವೊಂದು ಗುದ್ದಿದ ಪರಿಣಾಮ ಜಿಂಕೆಗೆ ಗಾಯವಾಗಿರಬಹುದು ಎಂದು ಊಹಿಸಲಾಗಿದೆ.
ಲೌಸಿಯಾನಾ ವನ್ಯಜೀವ ಹಾಗೂ ಮೀನುಗಾರಿಕೆ ಇಲಾಖೆಯ ಸಿಬ್ಬಂದಿ ಜಿಂಕೆಯನ್ನು ಸುರಕ್ಷಿತವಾಗಿ ಅಲ್ಲಿಂದ ಕರೆದೊಯ್ದಿದ್ದಾರೆ. ಬಳಿಕ ಆಸ್ಪತ್ರೆಯಲ್ಲಿ ಜಿಂಕೆ ಓಡಾಡಿದ ಸ್ಥಳವನ್ನು ಸ್ಯಾನಿಟೈಜ಼್ ಮಾಡಲಾಗಿದೆ.