alex Certify ಶಾಲೆ ತೊರೆದ 60 ವರ್ಷಗಳ ನಂತರ ವಿಶ್ವವಿದ್ಯಾಲಯದ ಮೆಟ್ಟಿಲು ಹತ್ತಿದ 77ರ ವೃದ್ಧೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಲೆ ತೊರೆದ 60 ವರ್ಷಗಳ ನಂತರ ವಿಶ್ವವಿದ್ಯಾಲಯದ ಮೆಟ್ಟಿಲು ಹತ್ತಿದ 77ರ ವೃದ್ಧೆ..!

ಕಲಿಯುವ ಮನಸ್ಸಿದ್ದರೆ ಅದಕ್ಕೆ ಯಾವುದೇ ವಯಸ್ಸಿನ ಅಡ್ಡಿಯಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ ಯುಕೆಯ ಈ ಮಹಿಳೆ. ಶಾಲೆಯನ್ನು ತೊರೆದ 60 ವರ್ಷಗಳ ನಂತರ ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸುವ ಹಂತದಲ್ಲಿದ್ದಾರೆ.

ಇಂಗ್ಲೆಂಡ್‌ನ ವೊಲ್ವರ್‌ಹ್ಯಾಂಪ್ಟನ್ ನಗರದ ಮಹಿಳೆ ಕೌಟುಂಬಿಕ ಕಾರಣಗಳಿಂದ ಸುಮಾರು 60 ವರ್ಷಗಳ ಹಿಂದೆ ಶಾಲೆ ಬಿಡಬೇಕಾಯಿತು. ಈಗ ಆಕೆಗೆ 77 ವರ್ಷ ವಯಸ್ಸಾಗಿದ್ದು, ಅವಳು ತನ್ನ ಜೀವಿತಾವಧಿಯ ಕನಸನ್ನು ನನಸಾಗಿಸಲು ಪಣ ತೊಟ್ಟಳು. ಅತ್ಯಂತ ಚಿಕ್ಕ ವಯಸ್ಸಿನಲ್ಲಿ, ಜಾನೆಟ್ ಮ್ಯಾಕ್‌ಡೌಗಲ್ ಅವರ ಪೋಷಕರು ಈಕೆಗೆ ಮದುವೆ ಮಾಡಿದ್ದು, ಕುಟುಂಬ ಜೀವನದತ್ತ ಗಮನ ಹರಿಸುವಂತೆ ಕೇಳಿಕೊಂಡಿದ್ದರಂತೆ.

ಪಾಪ, ಆಕೆಗೆ ತಾನು ಇನ್ನೂ ಓದಬೇಕು ಅನ್ನೋ ಹಂಬಲವಿತ್ತು. ಆದರೆ ಅದು ಈಡೇರಲಿಲ್ಲ. ತಾನು ಓದಲೇಬೇಕು ಎಂದು ಪಣತೊಟ್ಟ ಅವರು ಕಲಿಕೆಗೆ ಮುಂದಾಗಿದ್ದು, ತಮ್ಮ 77ನೇ ವಯಸ್ಸಿನಲ್ಲಿ ಕಲೆಯಲ್ಲಿ ಪದವಿಯನ್ನು ಪೂರ್ಣಗೊಳಿಸುತ್ತಿದ್ದಾರೆ. ಹಾಗಾದರೆ ಜಾನೆಟ್ ಳ ಪ್ರಯಾಣ ಹೇಗಿತ್ತು ಮತ್ತು ಆಕೆ ಈ ವಯಸ್ಸಿನಲ್ಲಿ ಪದವಿ ಶಿಕ್ಷಣವನ್ನು ಮುಂದುವರಿಸಲು ಕಾರಣ ಏನು ಎಂಬುದನ್ನು ನೋಡೋಣ ಬನ್ನಿ.

ಏಳು ವರ್ಷಗಳ ಹಿಂದೆ ಗಂಟಲು ಕ್ಯಾನ್ಸರ್‌ನಿಂದ ಜಾನೆಟ್ ತನ್ನ ಕಿರಿಯ ಮಗಳನ್ನು ಕಳೆದುಕೊಂಡಿದ್ದಾಳೆ. ತನ್ನ 45 ವರ್ಷದ ಮಗಳ ಮರಣದ ನಂತರ, ಅತೀವ ದುಃಖಿತರಾಗಿದ್ದರು. ನಂತರ ಚಿತ್ರಕಲೆಯತ್ತ ಆಸಕ್ತಿ ಹೊಂದಿದ ಜಾನೆಟ್, ತನ್ನ ಬಾಲ್ಯದ ಕನಸುಗಳನ್ನು ಸಾಧಿಸಲು ಸ್ಪೂರ್ತಿ ಹೊಂದಿ, ಕೋರ್ಸ್‌ಗೆ ಸೇರಿಕೊಂಡರು.

ಸುದೀರ್ಘ ಹೋರಾಟದ ನಂತರ ತನ್ನ ಓದುವ ಆಸೆಯನ್ನು ಜಾನೆಟ್ ಈಡೇರಿಸಿಕೊಂಡಿದ್ದಾರೆ. ಈಕೆ ತನ್ನ ಪದವಿಯನ್ನು ಪೂರ್ಣಗೊಳಿಸುವ ಹಂತದಲ್ಲಿದ್ದು, ವಾಲ್ವರ್‌ಹ್ಯಾಂಪ್ಟನ್ ವಿಶ್ವವಿದ್ಯಾಲಯದಲ್ಲಿ  ಅಂತಿಮ ವರ್ಷದಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...