ಮನೆಯಲ್ಲಿರುವ ಮಹಿಳೆಯರು ಮನೆ ಕೆಲಸ, ಅಡುಗೆ ಮಾಡ್ತಾರೆ. ಆದ್ರೆ ತಿನ್ನುವ ಪ್ರಮಾಣ ಮಾತ್ರ ಕಡಿಮೆ. ಅನೇಕ ಮಹಿಳೆಯರು ಅಳಿದುಳಿದ ಆಹಾರ ತಿನ್ನುತ್ತಾರೆ. ಇದು ಅವರ ಆರೋಗ್ಯವನ್ನು ಹಾಳು ಮಾಡುತ್ತದೆ. ರಾಜಸ್ಥಾನದ ಬನ್ಸ್ವಾರಾ ನಗರದಿಂದ 50 ಕಿಮೀ ದೂರದಲ್ಲಿರುವ ಹರೇಂದ್ರಗಢ ಎಂಬ ಬುಡಕಟ್ಟು ಹಳ್ಳಿಯಲ್ಲಿ ಇದು ಸಾಮಾನ್ಯವಾಗಿತ್ತು. ಇಲ್ಲಿನ ಮಹಿಳೆಯರು ಬಿಸಿ ಬಿಸಿ ಅಡುಗೆ ಮಾಡಿ, ಮನೆಯವರಿಗೆ ಬಡಿಸುತ್ತಿದ್ದರು. ಆದ್ರೆ ಕೊನೆಯಲ್ಲಿ ಅಳಿದುಳಿದ ಆಹಾರ ತಿನ್ನುತ್ತಿದ್ದರು. ಇದ್ರಿಂದ ಅವರ ಆರೋಗ್ಯದಲ್ಲಿ ಏರುಪೇರಾಗುತ್ತಿತ್ತು. ಈ ಸತ್ಯವನ್ನರಿತ ಸರಳಾ ಬರಿಯಾ, ಕ್ರಾಂತಿಗೆ ಇಳಿದರು.
ವರ್ಗಾವಣೆ ನಿರೀಕ್ಷೆಯಲ್ಲಿದ್ದ ನೌಕರ ವರ್ಗಕ್ಕೆ ಗುಡ್ ನ್ಯೂಸ್: ಇಲಾಖಾ ಸಚಿವರ ಹಂತದಲ್ಲೇ ವರ್ಗಾವಣೆಗೆ ಸಿಎಂ ಸೂಚನೆ
ಹಳೆ ಆಹಾರ ತಿನ್ನುವುದು ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಸಾಮಾಜಿಕ ಕಾರ್ಯಕರ್ತೆಯೊಬ್ಬರು ಸೂಚಿಸಿದಾಗ, ಸರಳಾ ಸಂಪ್ರದಾಯವನ್ನು ಮುರಿಯಲು ನಿರ್ಧರಿಸಿದರು ಮತ್ತು ಕುಟುಂಬಗಳು ಒಟ್ಟಿಗೆ ತಿನ್ನಬೇಕೆಂದು ಸಲಹೆ ನೀಡಿದರು. ಅತ್ತೆ, ಮನೆ, ಪತಿ ಎಲ್ಲರ ವಿರೋಧದ ಮಧ್ಯೆಯೇ ಹೋರಾಟಕ್ಕಿಳಿದ ಸರಳಾ, ಊರಿನ ಕೆಲ ಮಹಿಳೆಯರನ್ನು ಸೇರಿಸಿಕೊಂಡು, ಅಡುಗೆ ತಯಾರಿಸಿ ಒಟ್ಟಿಗೆ ತಿನ್ನುವ ಪದ್ಧತಿ ಜಾರಿಗೆ ತಂದರು.
ಸರಳಾ ಜೊತೆ ಕೈ ಜೋಡಿಸಿದ್ದು ಅಮುಲಿ ಘರ್ಸಿಯಾ. ಗ್ರಾಮದ ಮಹಿಳೆಯರನ್ನು ಸೇರಿಸಿ ಜಾಗೃತಿ ಮೂಡಿಸಲು ಶುರು ಮಾಡಿದ್ರು. ಆದ್ರೆ ಅತ್ತೆ, ಗಂಡನಿಂದ ಸಾಕಷ್ಟು ತೊಂದರೆ ಎದುರಿಸಬೇಕಾಯ್ತು. ಆದ್ರೆ ಕೆಲಸ ಬಿಡದ ಸರಳಾ, ಯಶಸ್ವಿಯಾಗಿದ್ದಾರೆ. ಎನ್ಜಿಒ ಮೂಲಕ, ಫೋಟೋ, ಕಥೆ, ಸಮಾಲೋಚನೆ ಮೂಲಕ 18 ತಿಂಗಳುಗಳಲ್ಲಿ ಮಹಿಳೆಯರು ಮತ್ತು ಪುರುಷರನ್ನು ಮನವೊಲಿಸಲು ಯಶಸ್ವಿಯಾದ್ರು.
ಉದ್ಯೋಗಿಗಳಿಗೆ ಹೊಸ ವರ್ಷಕ್ಕೆ ಸಿಗಲಿದೆಯಾ ಬಂಪರ್…? ಇಲ್ಲಿದೆ ಮುಖ್ಯ ಮಾಹಿತಿ
ಈಗ ಪತಿ ದಿನೇಶ್, ಸರಳಾಗೆ ನೆರವಾಗುತ್ತಿದ್ದಾರೆ. ವಾಸ್ತವದ ಅರಿವಾಗಿದೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಕೆಲಸ ಸುಲಭವಾಗುತ್ತದೆ. ಹಾಗೆ ಎಲ್ಲರೂ ಬಿಸಿ ಬಿಸಿ ಆಹಾರ ಸೇವನೆ ಮಾಡುವ ಅವಶ್ಯಕತೆಯಿದೆ ಎಂಬುದನ್ನು ಅವರು ಅರಿತಿದ್ದು, ಸರಳಾ ಬೆನ್ನಿಗೆ ನಿಂತಿದ್ದಾರೆ. ಆದ್ರೆ ಈಗ್ಲೂ ಇಲ್ಲಿ ಅತ್ತೆ, ಗಂಡನಿಗೆ ಹೆದರುವ ಮಹಿಳೆಯರಿದ್ದಾರೆ. ಹಳೆ ವಿಧಾನಕ್ಕೆ ಅಂಟಿಕೊಂಡೇ ಜೀವನ ನಡೆಸುತ್ತಿದ್ದಾರೆ.