alex Certify ಅಪ್ಪು ಅಗಲಿಕೆ ನೋವು ನನಗೆ ಎಂದಿಗೂ ಇರಲಿ: ‘ಪುನೀತ ನಮನ’ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟ ರಾಘಣ್ಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ಪು ಅಗಲಿಕೆ ನೋವು ನನಗೆ ಎಂದಿಗೂ ಇರಲಿ: ‘ಪುನೀತ ನಮನ’ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟ ರಾಘಣ್ಣ

ಬೆಂಗಳೂರು: ಅಪ್ಪು ಅಗಲಿಕೆ ನೋವು ಮರೆಯುವುದಕ್ಕೆ ಆಗುತ್ತಿಲ್ಲ. ಅಪ್ಪು ಅಗಲಿಕೆ ನೋವು ನನಗೆ ಎಂದಿಗೂ ಇರಲಿ ಎಂದು ರಾಘವೇಂದ್ರ ರಾಜಕುಮಾರ್ ಹೇಳಿದ್ದಾರೆ.

‘ಪುನೀತ ನಮನ’ ಕಾರ್ಯಕ್ರಮದಲ್ಲಿ ಗದ್ಗದಿತರಾಗಿ ಮಾತನಾಡಿದ ಅವರು, ಪವರ್ ಹೋದ್ಮೇಲೆ ಬಲ್ಪ್ ಏನ್ ಮಾಡಬೇಕು? ದೊಡ್ಡವರು ಸಣ್ಣ ತಮ್ಮನನ್ನು ಕಳುಹಿಸಿಕೊಡಬೇಕಾ?. ನಮ್ಮ ಮುಖ ನೋಡಿಕೊಳ್ಳಲು ನಾಚಿಕೆ ಆಯಿತು ಎಂದು ಮಾತಿನ ವೇಳೆ ರಾಘವೇಂದ್ರ ರಾಜಕುಮಾರ್ ಕಣ್ಣೀರಿಟ್ಟಿದ್ದಾರೆ.

ಅಪ್ಪು ಯಾವಾಗಲೂ ನಮ್ಮ ಜೊತೆಯಲ್ಲಿ ಇರುತ್ತಾನೆ. ಮೂರು ದಿನಗಳ ಕಾಲ ಸರ್ಕಾರ, ಪೊಲೀಸರು, ಅಭಿಮಾನಿಗಳು ಎಂಬ ಶಕ್ತಿಗಳು ಅಪ್ಪು ಜೊತೆಗೇ ಇದ್ದರು. ನಾವು ಕಣ್ಣೀರಿಟ್ಟರೆ ಮನೆಯವರು ಕುಗ್ಗಿಹೋಗುತ್ತಾರೆ. 20 ದಿನದಿಂದ ನೋವನ್ನು ನುಂಗಿಕೊಂಡಿದ್ದೆ. ಆದರೆ, ಇಂದು ಕಣ್ಣೀರು ತಡೆಯಲಾಗುತ್ತಿಲ್ಲ. ಮನೆಯ ಪವರ್ ಇಲ್ಲದಂತಾಗಿದೆ. ನಾವು ತಮ್ಮನನ್ನು ಕಳಿಸಿಕೊಡುವಂತಾಗಿದೆ ಎಂದು ರಾಘಣ್ಣ ಕಣ್ಣೀರಿಟ್ಟಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...