alex Certify ಗುಡ್​ ನ್ಯೂಸ್​: ಶೀಘ್ರದಲ್ಲೇ ಇಳಿಕೆಯಾಗಲಿದೆ ರೈಲ್ವೆ ಪ್ರಯಾಣ ದರ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಡ್​ ನ್ಯೂಸ್​: ಶೀಘ್ರದಲ್ಲೇ ಇಳಿಕೆಯಾಗಲಿದೆ ರೈಲ್ವೆ ಪ್ರಯಾಣ ದರ…..!

ಕಳೆದ ವಾರವಷ್ಟೇ ಭಾರತೀಯ ರೈಲ್ವೆ ಇಲಾಖೆಯು ಸಾಮಾನ್ಯ ರೈಲು ಸೇವೆಯನ್ನು ಪುನಾರಂಭಿಸುವ ಬಗ್ಗೆ ನಿರ್ಧಾರ ಕೈಗೊಂಡಿದೆ. ಜೊತೆಯಲ್ಲಿ ಮೇಲ್​ ಮತ್ತು ಎಕ್ಸ್​ಪ್ರೆಸ್​ ರೈಲುಗಳ ಮೇಲಿನ ವಿಶೇಷ ಟ್ಯಾಗ್​ ಕೈಬಿಡುವಂತೆ ಸೂಚನೆ ನೀಡಿದೆ. ಇದರಿಂದಾಗಿ ರೈಲ್ವೆ ಪ್ರಯಾಣ ದರ ಸುಮಾರು 15 ಪ್ರತಿಶತ ಇಳಿಕೆ ಕಾಣುವ ಸಾಧ್ಯತೆ ಇದೆ ಎನ್ನಲಾಗಿದೆ.

ಉದ್ಯೋಗಾಕಾಂಕ್ಷಿಗಳಿಗೆ ಗುಡ್​ ನ್ಯೂಸ್​: FSSAIನಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೋವಿಡ್​ 19 ಸಂದರ್ಭದಲ್ಲಿ ಸಂಚರಿಸುತ್ತಿದ್ದ ವಿಶೇಷ ರೈಲುಗಳ ಸ್ಥಾನವನ್ನು ಇನ್ಮುಂದೆ ಸಾಮಾನ್ಯ ಪ್ರಯಾಣಿಕ ರೈಲುಗಳೇ ತುಂಬಲಿವೆ.

ಇದರಿಂದ ಪ್ರಯಾಣಿಕರಿಗೆ ರೈಲು ಪ್ರಯಾಣ ದರದಲ್ಲಿ 15 ಪ್ರತಿಶತ ಇಳಿಕೆ ಕಾಣುವ ಸಾಧ್ತೆ ಇದೆ ಎಂದು ಭಾರತೀಯ ರೈಲ್ವೆ ಇಲಾಖೆಯ ಅಧಿಕಾರಿಯೊಬ್ಬರು ಅಂದಾಜಿಸಿದ್ದಾರೆ.

ವಿಶೇಷ ಎಂಬ ಟ್ಯಾಗ್​ ಪಡೆದ ಸುಮಾರು 1700ಕ್ಕೂ ಅಧಿಕ ರೈಲುಗಳ ಪ್ರಯಾಣ ದರದಲ್ಲಿ ಮುಂಬರುವ ದಿನಗಳಲ್ಲಿ ಇಳಿಕೆ ಕಂಡು ಬರುವ ಸಾಧ್ಯತೆ ದಟ್ಟವಾಗಿದೆ.

ಆಶೀರ್ವಚನ ನೀಡುತ್ತಿರುವಾಗಲೇ ಹೃದಯಾಘಾತ; ಜನ್ಮ ದಿನದಂದು ವೇದಿಕೆ ಮೇಲೆಯೇ ಲಿಂಗೈಕ್ಯರಾದ ಸ್ವಾಮೀಜಿ

ಪ್ರಸಕ್ತ ಹಣಕಾಸು ವರ್ಷದ ಮೊದಲ ತಿಂಗಳಲ್ಲಿ ರೈಲಿನಲ್ಲಿ 1180.19 ಮಿಲಿಯನ್​ ಪ್ರಯಾಣಿಕರು ಸಂಚರಿಸಿದ್ದಾರೆ. ಹಿಂದಿನ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ 69.88 ಮಿಲಿಯನ್​ ಪ್ರಯಾಣಿಕರು ಸಂಚರಿಸಿದ್ದರು. ಭಾರತೀಯ ರೈಲ್ವೆ ಇಲಾಖೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿಯೇ 15,434.18 ಕೋಟಿ ರೂಪಾಯಿ ಸಂಪಾದಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...