ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ ತಂಡವನ್ನು ಯಾವೆಲ್ಲ ರೀತಿಯಲ್ಲಿ ಮುನ್ನೆಡಸಬೇಕೆಂದು ಪ್ಲಾನ್ ಮಾಡ್ತಿದ್ದಾರೆ. ಈ ನಡುವೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಆಯ್ಕೆಯಾಗುವ ಮುನ್ನ ದ್ರಾವಿಡ್ರ ಪುತ್ರನೊಂದಿಗೆ ಫೋನ್ನಲ್ಲಿ ನಡೆಸಿದ ಫನ್ನಿ ಸಂಭಾಷಣೆಯ ನೆನಪುಗಳನ್ನು ಹಂಚಿಕೊಂಡ್ರು. ನಾವು ದ್ರಾವಿಡ್ರನ್ನು ಮುಖ್ಯ ಕೋಚ್ ಆಗಿ ನೇಮಿಸಲು ಆ ಫೋನ್ ಕರೆಯೇ ಕಾರಣ ಎಂದು ತಮಾಷೆಯಾಗಿ ಹೇಳಿದ್ರು.
40ನೇ ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಮಾತನಾಡಿದ ಗಂಗೂಲಿ, ನನಗೆ ಒಮ್ಮ ರಾಹುಲ್ ಪುತ್ರ ಕರೆ ಮಾಡಿ ನನ್ನ ತಂದೆ ನನ್ನೊಂದಿಗೆ ತುಂಬಾ ಸ್ಟ್ರಿಕ್ಟ್ ಆಗಿ ವರ್ತಿಸುತ್ತಿದ್ದಾರೆ. ಹೀಗಾಗಿ ನೀವು ಅವರನ್ನು ಕರೆದುಕೊಂಡು ಹೋಗಿ ಎಂದಿದ್ದನಂತೆ. ಇದಾದ ಬಳಿಕ ನಾನು ದ್ರಾವಿಡ್ಗೆ ಕರೆ ಮಾಡಿ ನೀವು ಟೀಂ ಇಂಡಿಯಾಗೆ ಸೇರುವ ಅವಕಾಶ ಬಂದಿದೆ ಎಂದು ಹೇಳಿದ್ದೆ ಅಂತಾ ಹಳೆಯ ನೆನಪನ್ನು ಮೆಲುಕು ಹಾಕಿದ್ರು.
ಟಿ 20 ವರ್ಲ್ಡ್ ಕಪ್ ಬಳಿಕ ರವಿಶಾಸ್ತ್ರಿ ಟೀಂ ಇಂಡಿಯಾದ ಮುಖ್ಯ ಕೋಚ್ ಸ್ಥಾನದಿಂದ ಕೆಳಗಿಳಿದಿದ್ದಾರೆ. 2 ವರ್ಷಗಳಿಗೆ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವ ದ್ರಾವಿಡ್ ತವರಿನಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಟಿ 20 ಸರಣಿಗೆ ಮಾರ್ಗದರ್ಶನ ನೀಡಲಿದ್ದಾರೆ.