ಆರು ತಿಂಗಳಲ್ಲಿ 400 ಮಂದಿ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರಗೈದ ಅಮಾನವೀಯ ಘಟನೆಯು ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ವರದಿಯಾಗಿದೆ. ಈ ಸಂಬಂಧ ದೂರು ದಾಖಲಿಸಲು ಪ್ರಯತ್ನಿಸಿದ ವೇಳೆಯಲ್ಲಿ ಪೊಲೀಸರು ಸಹ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರಂತೆ..! ಅಂದ ಹಾಗೆ ಆಕೆ ಈಗ 2 ತಿಂಗಳ ಗರ್ಭಿಣಿ.
ಬಾಲಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಸ್ಕೋ ಕಾಯ್ದೆಯಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ಮೂವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಪ್ರಾಪ್ತೆ ದಾಖಲಿಸಿರುವ ದೂರಿನ ಪ್ರಕಾರ, ಕೆಲ ವರ್ಷಗಳ ಹಿಂದೆ ಬಾಲಕಿ ತಾಯಿಯನ್ನು ಕಳೆದುಕೊಂಡಿದ್ದಳು. ಆಕೆಯ ತಂದೆ 8 ತಿಂಗಳ ಹಿಂದೆ ಆಕೆಯ ಮದುವೆ ಮಾಡಿಸಿದ್ದರು. ಮದುವೆಯಾದ ಬಳಿಕ ಆಕೆಯ ಪತಿ ಹಾಗೂ ಅತ್ತೆ-ಮಾವ ಪ್ರತಿನಿತ್ಯ ಹಲ್ಲೆ ನಡೆಸುತ್ತಿದ್ದರು.
ರುಚಿ ರುಚಿ ‘ಹಾಲು ಪಾಯಸ’ ಮಾಡುವ ವಿಧಾನ
ಇದರಿಂದ ಬೇಸತ್ತಿದ್ದ ಅಪ್ರಾಪ್ತೆ ತವರಿಗೆ ಮರಳಿದ್ದಳು. ಆದರೆ ತಂದೆಯು ಆಕೆಯನ್ನು ಮನೆಯಲ್ಲಿ ಇರಿಸಿಕೊಳ್ಳಲು ಇಚ್ಚಿಸದ ಹಿನ್ನೆಲೆಯಲ್ಲಿ ಆಕೆಯ ಅಂಬಾಗೋಜಾಯ್ನ ಬಸ್ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಿದ್ದಳು. ಈ ಅವಧಿಯಲ್ಲಿ ಆಕೆ ಸಾಕಷ್ಟು ಲೈಂಗಿಕ ದೌರ್ಜನ್ಯವನ್ನು ಎದುರಿಸಿದ್ದಾಳೆ.
ನನ್ನ ಮೇಲೆ ಅನೇಕರು ಅತ್ಯಾಚಾರ ಎಸೆಗಿದ್ದಾರೆ. ಈ ಸಂಬಂಧ ದೂರು ನೀಡಲು ನಾನು ಸಾಕಷ್ಟು ಬಾರಿ ಪೊಲೀಸ್ ಠಾಣೆಗೆ ಬಂದಿದ್ದೆ. ಆದರೆ ಪೊಲೀಸರು ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ. ಬದಲಾಗಿ ನನ್ನ ಮೇಲೆಯೇ ದೌರ್ಜನ್ಯ ಎಸಗಿದ್ರು ಎಂದು ಹೇಳಿದ್ದಾಳೆ.
ಕೊನೆಗೂ ಈ ಪ್ರಕರಣ ಸಂಬಂಧ ದೂರು ದಾಖಲಾಗಿದೆ. ತನಿಖೆಗೆ ಚುರುಕು ನೀಡಲಾಗಿದ್ದು ಈಗಾಗಲೇ ಮೂವರನ್ನು ಬಂಧಿಸಲಾಗಿದೆ.