ಸಂಘಟಿತ ನೌಕರರ ವಲಯದ ಪ್ರತಿ ಸಂಸ್ಥೆಯ ನೌಕರರಿಗೂ ಸಕ್ರಿಯವಾದ ಪಿಎಫ್ ಖಾತೆ ತೆರೆದಿಡಲಾಗಿರುತ್ತದೆ. ಮಾಸಿಕ ವೇತನದ ಸ್ವಲ್ಪ ಭಾಗವು ಈ ಪಿಎಫ್ ಖಾತೆಗೆ ತಾನೇ ತಾನಾಗಿಯೇ ವರ್ಗಾವಣೆಗೊಳ್ಳುತ್ತದೆ. ವಾರ್ಷಿಕವಾಗಿ ಬಡ್ಡಿಯನ್ನು ಕೂಡ ಸಂಗ್ರಹಿತ ಮೊತ್ತಕ್ಕೆ ಸರಕಾರ ನೀಡುತ್ತದೆ. ಆದರೆ, ಎಂಪ್ಲಾಯ್ಸ್ ಪ್ರಾವಿಡೆಂಟ್ ಫಂಡ್ಸ್ ಕಾಯಿದೆಯ ಪ್ರಕಾರ ಇನ್ಮುಂದೆ ಪ್ರತಿಯೊಬ್ಬ ನೌಕರರು ಕೂಡ ಸಾರ್ವತ್ರಿಕ ಖಾತೆ ಸಂಖ್ಯೆ (ಯುಎಎನ್) ಹೊಂದುವುದು ಕಡ್ಡಾಯವಾಗಿದೆ.
ಇದೊಂದು ಮಾದರಿ ಡಿಜಿಟಲ್ ಲಾಗಿನ್ ಇದ್ದಂತೆ. ಪಿಎಫ್ ಖಾತೆದಾರರೇ ವೆಬ್‌ಸೈಟ್‌ಗೆ ಯುಎಎನ್ ಮೂಲಕ ಲಾಗಿನ್ ಆಗಿ, ತಮ್ಮ ಖಾತೆಯಲ್ಲಿ ಜಮೆಯಾಗಿರುವ ಮೊತ್ತವನ್ನು ತಿಳಿದುಕೊಳ್ಳಬಹುದು. ವರ್ಗಾವಣೆ ಮತ್ತು ಖಾಸಗಿ ಮಾಹಿತಿ ಬದಲಾವಣೆಗೂ ಯುಎಎನ್ ಪೋರ್ಟಲ್‌ನಲ್ಲಿ ಅವಕಾಶವಿದೆ. ಆನ್‌ಲೈನ್ ಪಾಸ್‌ಬುಕ್ ಸೇವೆ ಕೂಡ ಸಿಗುತ್ತದೆ.
ಆದರೆ, ಎಲ್ಲದಕ್ಕಿಂತ ಮೊದಲು ಪಿಎಫ್ ಖಾತೆದಾರರು ತಮ್ಮ ಖಾತೆಗೆ ಲಿಂಕ್ ಆಗಿರುವ ಯುಎಎನ್ ಸಂಖ್ಯೆಯನ್ನು ಸಕ್ರಿಯಗೊಳಿಸಿಕೊಳ್ಳಬೇಕು. ಅದಕ್ಕಾಗಿ ಮಾಡಬೇಕಿರುವುದು ಇಷ್ಟೇ,
ಹೆಚ್ -1 ಬಿ ವೀಸಾ: ಭಾರತೀಯರಿಗೆ ಗುಡ್ ನ್ಯೂಸ್; ಸಂಗಾತಿಗೂ ಉದ್ಯೋಗಾವಕಾಶ
* ಇಪಿಎಫ್‌ಒ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
* ಬಳಿಕ ಆಕ್ಟಿವೇಟ್ ಯುಎಎನ್ ಬಟನ್ ಕ್ಲಿಕ್ ಮಾಡಿರಿ
* ಈಗ ನೀಡಲಾಗುವ ಆಯ್ಕೆಗಳಾದ ಯುಎಎನ್, ಸದಸ್ಯರ ಐಡಿ, ಪ್ಯಾನ್ ಅಥವಾ ಆಧಾರ್ ದಾಖಲೆ ನಮೂದಿಸಿರಿ
* ಹೆಸರು, ಜನ್ಮದಿನಾಂಕ, ಮೊಬೈಲ್ ಸಂಖ್ಯೆ, ಇ-ಮೇಲ್‌ಗಳಂತಹ ಹೆಚ್ಚಿನ ಮಾಹಿತಿ ತುಂಬಿರಿ.
* ಬಳಿಕ ಅಧಿಕೃತ ಪಿನ್ ಅಥವಾ ಪಾಸ್‌ವರ್ಡ್ ಪಡೆಯಲು ’’ಗೆಟ್ ಆಥರೈಸೇಶನ್ ಪಿನ್’’ ಬಟನ್ ಕ್ಲಿಕ್ ಮಾಡಿರಿ.
ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಪಿನ್ ಸ್ವೀಕೃತವಾಗಲಿದೆ. ವೆಬ್‌ಸೈಟ್‌ನಲ್ಲಿ ಪಿನ್ ದಾಖಲಿಸಿ, ಒಟಿಪಿ ಪರಿಶೀಲನೆ ಮತ್ತು ಯುಎಎನ್ ಸಕ್ರಿಯಗೊಳಿಸಿ ಬಟನ್ ಒತ್ತಿರಿ.
ಇದಾದ ಬಳಿಕ ನಿಮಗೆ ಬಳಕೆದಾರರ ಐಡಿ ಮತ್ತು ಪಾಸ್ ವರ್ಡ್ ಸೃಷ್ಟಿಗೆ ಅವಕಾಶ ನೀಡಲಾಗುವುದು. ಇ-ಮೇಲ್‌ಗಳಿಗೆ ಬಳಸುವಂತೆ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ನೀಡಿ, ಅವುಗಳನ್ನು ಸರಿಯಾಗಿ ಒಂದು ಕಡೆ ದಾಖಲಿಸಿ ಇಟ್ಟುಕೊಳ್ಳಿರಿ. ಪ್ರತಿ ಬಾರಿ ಪಿಎಫ್ ಮೊತ್ತ ಪರಿಶೀಲನೆಗೆ ಇವುಗಳು ಅಗತ್ಯವಾಗಿದೆ.