ಪಾಕಿಸ್ತಾನಕ್ಕೆ ಬೆಂಬಲ ಸೂಚಿಸಿದ ಸಾನಿಯಾ: ನೆಟ್ಟಿಗರಿಂದ ತೀವ್ರ ತರಾಟೆ…..! 12-11-2021 11:46AM IST / No Comments / Posted In: Latest News, Live News, Sports ಟಿ 20 ವರ್ಲ್ಡ್ಕಪ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಪಾಕಿಸ್ತಾನ ದುಬೈನಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಸೋತು ಸೆಮಿಫೈನಲ್ನಿಂದ ಹೊರಬಿದ್ದಿದೆ. ಹೀಗಾಗಿ ಆಸ್ಟ್ರೇಲಿಯಾ ತಂಡವು ಫೈನಲ್ನಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನದ ಸೋಲು ಆಸಿಸ್ ಕ್ರಿಕೆಟ್ ತಂಡದ ಅಭಿಮಾನಿಗಳಿಗಿಂತ ಟೀಂ ಇಂಡಿಯಾ ಅಭಿಮಾನಿಗಳಿಗೆ ಹೆಚ್ಚು ಖುಷಿ ತಂದುಕೊಟ್ಟಿದೆ. ಅಲ್ಲದೇ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಪಾಕಿಸ್ತಾನ ತಂಡಕ್ಕೆ ಬೆಂಬಲ ಸೂಚಿಸಿದ್ದರ ಬಗ್ಗೆಯೂ ಸೋಶಿಯಲ್ ಮೀಡಿಯಾದಲ್ಲಿ ಖಾರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಾಕಿಸ್ತಾನದ ಆಟಗಾರರಿಗೆ ಸಾನಿಯಾ ಏಕೆ ಬೆಂಬಲ ನೀಡಬೇಕು ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಭಾರತೀಯ ಪ್ರಜೆಯಾಗಿ ನೀವು ಮತ್ತೊಂದು ತಂಡವನ್ನು ಹೇಗೆ ಬೆಂಬಲಿಸುತ್ತೀರಾ ಎಂದು ಕೇಳಿದ್ದಾರೆ. ಕೆಲವರಂತೂ ಪಾಕಿಸ್ತಾನ ತಂಡಕ್ಕೆ ಬೆಂಬಲ ನೀಡುವ ನೀವು ಟೆನ್ನಿಸ್ನಲ್ಲಿ ಭಾರತದ ಪರ ಆಡೋದು ಏಕೆ ಎಂದೂ ಕೇಳಿದ್ದಾರೆ. https://twitter.com/n80iyerboi/status/1458846902363955218 Why @MirzaSania playing for India @narendramodi @AmitShah please explain… — Priyajyoti Das (@PPriyajyoti) November 11, 2021 https://twitter.com/1CommonMan_/status/1458848004610269208