alex Certify ಪಾಕಿಸ್ತಾನಕ್ಕೆ ಬೆಂಬಲ ಸೂಚಿಸಿದ ಸಾನಿಯಾ: ನೆಟ್ಟಿಗರಿಂದ ತೀವ್ರ ತರಾಟೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕಿಸ್ತಾನಕ್ಕೆ ಬೆಂಬಲ ಸೂಚಿಸಿದ ಸಾನಿಯಾ: ನೆಟ್ಟಿಗರಿಂದ ತೀವ್ರ ತರಾಟೆ…..!

ಟಿ 20 ವರ್ಲ್ಡ್​ಕಪ್​ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಪಾಕಿಸ್ತಾನ ದುಬೈನಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಸೋತು ಸೆಮಿಫೈನಲ್​ನಿಂದ ಹೊರಬಿದ್ದಿದೆ. ಹೀಗಾಗಿ ಆಸ್ಟ್ರೇಲಿಯಾ ತಂಡವು ಫೈನಲ್​ನಲ್ಲಿ ನ್ಯೂಜಿಲೆಂಡ್​ ತಂಡವನ್ನು ಎದುರಿಸಲಿದೆ.

ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನದ ಸೋಲು ಆಸಿಸ್​ ಕ್ರಿಕೆಟ್​ ತಂಡದ ಅಭಿಮಾನಿಗಳಿಗಿಂತ ಟೀಂ ಇಂಡಿಯಾ ಅಭಿಮಾನಿಗಳಿಗೆ ಹೆಚ್ಚು ಖುಷಿ ತಂದುಕೊಟ್ಟಿದೆ. ಅಲ್ಲದೇ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ಪಾಕಿಸ್ತಾನ ತಂಡಕ್ಕೆ ಬೆಂಬಲ ಸೂಚಿಸಿದ್ದರ ಬಗ್ಗೆಯೂ ಸೋಶಿಯಲ್​ ಮೀಡಿಯಾದಲ್ಲಿ ಖಾರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪಾಕಿಸ್ತಾನದ ಆಟಗಾರರಿಗೆ ಸಾನಿಯಾ ಏಕೆ ಬೆಂಬಲ ನೀಡಬೇಕು ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಭಾರತೀಯ ಪ್ರಜೆಯಾಗಿ ನೀವು ಮತ್ತೊಂದು ತಂಡವನ್ನು ಹೇಗೆ ಬೆಂಬಲಿಸುತ್ತೀರಾ ಎಂದು ಕೇಳಿದ್ದಾರೆ. ಕೆಲವರಂತೂ ಪಾಕಿಸ್ತಾನ ತಂಡಕ್ಕೆ ಬೆಂಬಲ ನೀಡುವ ನೀವು ಟೆನ್ನಿಸ್​ನಲ್ಲಿ ಭಾರತದ ಪರ ಆಡೋದು ಏಕೆ ಎಂದೂ ಕೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...