ಟರ್ಕಿಶ್ ರೀತಿಯಲ್ಲಿ ಐಸ್ ಕ್ರೀಂ ಸರ್ವ್ ಮಾಡುವ ಸಾಕಷ್ಟು ವಿಡಿಯೋಗಳನ್ನು ನೀವು ಸೋಶಿಯಲ್ ಮೀಡಿಯಾಗಳಲ್ಲಿ ನೋಡಿರುತ್ತೀರಿ. ಅಥವಾ ನಿಮಗೂ ಇದರ ಅನುಭವ ಇದ್ದಿರಬಹುದು. ಇವರು ಅಷ್ಟು ಸುಲಭಕ್ಕೆ ನಿಮ್ಮ ಕೈಗೆ ನಿಮಿಷ್ಟದ ಐಸ್ಕ್ರೀಂ ನೀಡೋದಿಲ್ಲ. ಸಿಕ್ಕಾಪಟ್ಟೆ ಕಾಡಿಸಿ, ಪೀಡಿಸಿ, ಕಿರಿಕಿರಿ ನೀಡಿ ಕೊನೆಗೆ ಐಸ್ಕ್ರೀಂ ನೀಡುತ್ತಾರೆ.
ಯಾವಾಗಲೂ ಗ್ರಾಹಕರಿಗೆ ಚಮಕ್ ನೀಡುವ ಈ ಐಸ್ಕ್ರೀಂ ಮಳಿಗೆ ಸಿಬ್ಬಂದಿಗೆ ಈ ಬಾರಿ ಗ್ರಾಹಕನೇ ಚಳ್ಳೆ ಹಣ್ಣು ತಿನ್ನಿಸಿದ್ದಾನೆ. ಹೌದು..! ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಟರ್ಕಿಶ್ ರೀತಿಯಲ್ಲಿ ಐಸ್ಕ್ರೀಂ ನೀಡದೇ ಸತಾಯಿಸುತ್ತಿದ್ದ ಸಿಬ್ಬಂದಿಯ ಕೈನಿಂದ ಗ್ರಾಹಕ ದೊಡ್ಡ ಸ್ಕೂಪ್ ಐಸ್ಕ್ರೀಂನ್ನೇ ಹೊತ್ತೊಯ್ದಿದ್ದಾನೆ. ಇದನ್ನು ನೋಡಿದ ಸುತ್ತಲಿನ ಜನರು ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಾರೆ.
ಈ ವಿಡಿಯೋವನ್ನು ಯುಟ್ಯೂಬ್ನಲ್ಲಿ ಶೇರ್ ಮಾಡಲಾಗಿದ್ದರು ಕೆಲವೇ ಗಂಟೆಗಳಲ್ಲಿ 42 ಸಾವಿರಕ್ಕೂ ಅಧಿಕ ವೀವ್ಸ್ ಸಂಪಾದಿಸಿದೆ. ಇದೀಗ ಎಲ್ಲಾ ಸೋಶಿಯಲ್ ಮೀಡಿಯಾದ ವೇದಿಕೆಗಳಲ್ಲೂ ಈ ವಿಡಿಯೋ ಧೂಳೆಬ್ಬಿಸುತ್ತಿದೆ.