ಇಂಡಿಯನ್ ಪ್ರೀಮಿಯರ್ ಲೀಗ್ನ 15ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮುಖ್ಯ ಕೋಚ್ ಆಗಿ ಸಂಜಯ್ ಬಂಗಾರ್ ಅಧಿಕೃತವಾಗಿ ನೇಮಕಗೊಂಡಿದ್ದಾರೆ.
ಸಂಜಯ್ ಬಂಗಾರ್ ಈ ಮೂಲಕ ಮೈಕ್ ಹೆಸ್ಸನ್ರಿಂದ ಅಧಿಕಾರವನ್ನು ಹಸ್ತಾಂತರಿಸಿಕೊಳ್ಳಲಿದ್ದಾರೆ. ಸಂಜಯ್ ಬಂಗಾರ್ರನ್ನು ತಂಡದ ಮುಖ್ಯ ಕೋಚ್ ಎಂದು ಘೋಷಣೆ ಮಾಡಿದ ಬಳಿಕ ಮಾತನಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಚೇರ್ಮ್ಯಾನ್, ಪ್ರಥಮೇಶ್ ಮಿಶ್ರಾ, ಆರ್ಸಿಬಿ ತಂಡದಲ್ಲಿರುವ ಆಟಗಾರರ ಪ್ರತಿಭೆಯನ್ನು ಬೆಂಬಲಿಸುವ ಹಾಗೂ ಅದನ್ನು ಇನ್ನಷ್ಟು ಸುಧಾರಿಸುವ ತತ್ವಕ್ಕೆ ಬದ್ಧವಾಗಿದೆ. ಇದೇ ನಂಬಿಕೆಯ ಮೇಲೆ ಸಂಜಯ್ ಬಂಗಾರ್ರನ್ನು ಮುಖ್ಯ ಕೋಚ್ ಆಗಿ ನೇಮಿಸಿದ್ದೇವೆ ಎಂದು ಹೇಳಿದ್ದಾರೆ.
ಸಂಜಯ್ ಬಂಗಾರ್ ಆರ್ಸಿಬಿಯ ಬ್ಯಾಟಿಂಗ್ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಟೀಂ ಇಂಡಿಯಾ ಕ್ರಿಕೆಟ್ ತಂಡದ ಜೊತೆಯೂ ಕೆಲಸ ಮಾಡಿರುವ ಅನುಭವ ಹೊಂದಿರುವ ಇವರು ನಮ್ಮ ತಂಡಕ್ಕೆ ಅನುಭವದ ಖಜಾನೆಯನ್ನೇ ಹೊತ್ತು ತರುತ್ತಿದ್ದಾರೆ ಎಂದು ಹೇಳಿದ್ರು.
ಆರ್ಸಿಬಿ ತಂಡದಲ್ಲಿ ತಮ್ಮ ಹೊಸ ಜವಾಬ್ದಾರಿಯ ವಿಚಾರವಾಗಿ ಮಾತನಾಡಿದ ಸಂಜಯ್ ಬಂಗಾರ್, ಐಪಿಎಲ್ನ ಶ್ರೇಷ್ಟ ಫ್ರಾಂಚೈಸಿಗೆ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವುದು ನನ್ನ ಪಾಲಿಗೆ ಹೆಮ್ಮೆಯ ವಿಚಾರವಾಗಿದೆ. ಈ ತಂಡದ ಕೆಲ ಪ್ರತಿಭಾನ್ವಿತ ಆಟಗಾರರೊಂದಿಗೆ ನಾನು ಕೆಲಸ ಮಾಡಿದ್ದೇನೆ. ಈ ತಂಡವನ್ನು ಇನ್ನೊಂದು ಮಟ್ಟಕ್ಕೆ ಕೊಂಡೊಯ್ಯಲು ನಾನು ಕಾತುರನಾಗಿದ್ದೇನೆ ಎಂದು ಹೇಳಿದ್ರು.